ತಿರುವನಂತಪುರ: ಕೇರಳದ ವಯನಾಡಿನಲ್ಲಿ ಕಳೆದ ವರ್ಷ ಜು.30ರಂದು ಸಂಭವಿಸಿದ್ದ ಭೀಕರ ಭೂಕುಸಿತದಲ್ಲಿ ನಾಪತ್ತೆಯಾಗಿದ್ದವರನ್ನು ಮೃತರು ಎಂದು ಘೋಷಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಜತೆಗೆ ಅವರ ಕುಟುಂಬ ಸದಸ್ಯರಿಗೆ ಪರಿಹಾರ ನೀಡಲೂ ನಿರ್ಧರಿಸಲಾಗಿದೆ. ನಾಪತ್ತೆಯಾಗಿರುವವರ ವಿವರಗಳನ್ನು ಪರಿಶೀಲಿಸಲು ಸ್ಥಳೀಯ ಮಟ್ಟದಲ್ಲಿ ಸಮಿತಿ ರಚಿಸಲಾಗುತ್ತದೆ.
ಅದು ಸಲ್ಲಿಸುವ ವರದಿಯನ್ನು ವಿಪತ್ತು ನಿರ್ವಹಣಾ ಪ್ರಾಧಿಕಾರ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಿದೆ. ಇದರಿಂದಾಗಿ ಅವರ ಕುಟುಂಬ ಸದಸ್ಯರಿಗೆ ರಾಜ್ಯ ಸರ್ಕಾರದಿಂದ ನೆರವು ಪಡೆಯಲೂ ಸಾಧ್ಯವಾಗಲಿದೆ. ವಯನಾಡ್‌ನ ಚೂರಲ್‌ವುಲ, ಮುಂಡಕ್ಕೆ„ಗಳಲ್ಲಿ ಭೂಕುಸಿತದಿಂದಾಗಿ 263 ಮಂದಿ ಮೃತಪಟ್ಟು, 35 ಮಂದಿ ಸಾವನ್ನಪ್ಪಿದ್ದರು.