Kerala; 1 ಕ್ಷೇತ್ರದಲ್ಲಿ ಆರ್ ಜೆಡಿ ಜಯ: ಅಸ್ತಿತ್ವ ಕಳೆದುಕೊಂಡ ಜೆಡಿಎಸ್

Share with

ಆಡಳಿತ ವಿರೋಧಿ ಅಲೆಯ ಮೇಲೆ ಸವಾರಿ ಮಾಡಿ ಗೆದ್ದ ಪ್ರವೀಣ್

ತಿರುವನಂತಪುರಂ: ಕೇರಳದಲ್ಲಿ ಯುಡಿಎಫ್ ಮತ್ತು ಎಲ್ ಡಿಎಫ್‌ ನಡುವೆ ಜನತಾ ಪರಿವಾರದ ಅಸ್ತಿತ್ವ ಇನ್ನೂ ಉಳಿದಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಆಡಳಿತ ವಿರೋಧಿ ಅಲೆಯ ಮೇಲೆ ಸವಾರಿ ಮಾಡಿ ರಾಷ್ಟ್ರೀಯ ಜನತಾ ದಳ ದಿಂದ ಓರ್ವ ಶಾಸಕ ಆಯ್ಕೆಯಾಗಿದ್ದಾರೆ.

ಕಣ್ಣೂರು ಜಿಲ್ಲೆಯ ಕುತುಪರಂಬ ಕ್ಷೇತ್ರದಲ್ಲಿ ಎಲ್ ಡಿಎಫ್ ಬೆಂಬಲಿತ ಆರ್ ಜೆಡಿ ಅಭ್ಯರ್ಥಿಯಾಗಿದ್ದ ಪಿ.ಕೆ. ಪ್ರವೀಣ್ ಅವರು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್(ಯುಡಿಎಫ್) ಅಭ್ಯರ್ಥಿ ಜಯಂತಿ ರಾಜನ್ ವಿರುದ್ಧ 1286 ಮತಗಳ ಅಂತರದಿಂದ ಜಯ ಸಾಧಿಸಿ ವಿಧಾನಸಭೆ ಪ್ರವೇಶಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

2011 ರಲ್ಲಿ ಜನತಾದಳ (ಜಾತ್ಯತೀತ) ದಿಂದ ಬೇರ್ಪಟ್ಟ ಸಮಾಜವಾದಿ ಜನತಾಪಕ್ಷದಿಂದ ಕೆ.ಪಿ. ಮೋಹನನ್ ಗೆಲುವು ಸಾಧಿಸಿದ್ದರು. ಆ ಬಳಿಕ ಸಿಪಿಐ ಕ್ಷೇತ್ರದಲ್ಲಿ ಗೆದ್ದಿತ್ತು, ಮತ್ತೆ 2021 ರಲ್ಲಿ ಕೆ.ಪಿ. ಮೋಹನನ್ ಜಯ ಸಾಧಿಸಿದ್ದರು. ಯುಡಿಎಫ್ ಅಲೆಯ ಹೊರತಾಗಿಯೂ ಕ್ಷೇತ್ರವನ್ನು ಆ‌ರ್ ಜೆಡಿ ಮತ್ತೆ ಗೆದ್ದಿದೆ.

ಆರ್ ಜೆಡಿ ಮೂರು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು ಕೋಝಿಕ್ಕೋಡ್‌ನ ವಡಕರ ಮತ್ತು ವಯನಾಡಿನ ಕಲ್ಪಟ್ಟದಲ್ಲಿ ಅಭ್ಯರ್ಥಿಗಳು ಸೋಲು ಅನುಭವಿಸಿದ್ದಾರೆ. ತೇಜಸ್ವಿ ಯಾದವ್ ಕೂಡ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ಬಂದಿದ್ದರು. ಒಂದು ಸ್ಥಾನ ಗೆದ್ದುಕೊಂಡಿರುವುದು ದಕ್ಷಿಣದಲ್ಲಿ ಪಕ್ಷಕ್ಕೆ ಮಹತ್ವದ ಸಾಧನೆಯಾಗಿದೆ.

ಪಿ.ಕೆ. ಪ್ರವೀಣ್ ಒಬ್ಬ ಉದ್ಯಮಿಯಾಗಿದ್ದು, ಅಣ್ಣಾಮಲೈ ವಿವಿಯಿಂದ ಸ್ನಾತಕೋತ್ತರ ಪದವಿ ಮತ್ತು ಎಂ.ಫಿಲ್ ಪದವಿ ಪಡೆದಿದ್ದಾರೆ.

ಆರ್ ಜೆಡಿ ಬಿಹಾರದಲ್ಲಿ ಕಾಂಗ್ರೆಸ್ ಮೈತ್ರಿಕೂಟದೊಂದಿಗೆ ಇದ್ದರೂ ಕೇರಳದಲ್ಲಿ ಎಡರಂಗಕ್ಕೆ ಬೆಂಬಲ ನೀಡಿದೆ. ಹಿಂದೆ ಎಲ್ ಡಿಎಫ್ ಮೈತ್ರಿಕೂಟದಲ್ಲಿ ಜೆಡಿಎಸ್‌ ಶಾಸಕರ ಪ್ರಾತಿನಿಧ್ಯ ಹೊಂದಿರುತ್ತಿತ್ತು. 2016 ರಲ್ಲಿ 3, 2011 ರಲ್ಲಿ ಜೆಡಿಎಸ್ 4 ಶಾಸಕರನ್ನು ಹೊಂದಿತ್ತು. ಎನ್ ಡಿಎ ಮೈತ್ರಿಕೂಟಕ್ಕೆ ಜೆಡಿಎಸ್ ಸೇರ್ಪಡೆಯಾದ ಬಳಿಕ ಕೇರಳದಲ್ಲಿ ಅಸ್ತಿತ್ವ ಕಳೆದುಕೊಂಡಿದೆ.


Share with

Leave a Reply

Your email address will not be published. Required fields are marked *