ರಸ್ತೆ ಅಪಘಾತ ತಡೆಯಲು ಹೊಸ ತಂತ್ರಜ್ಞಾನ ಪರಿಚಯಿಸಿದ ಕೇಂದ್ರ: 2026ಕ್ಕೆ ಎಲ್ಲ ವಾಹನಗಳಿಗೆ ಅಳವಡಿಕೆ

Share with

ಭಾರತದಾದ್ಯಂತ ಅಪಘಾತಗಳನ್ನು ತಪ್ಪಿಸಲು ಹೊಸ ತಂತ್ರಜ್ಞಾನವನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ವಾಹನದಿಂದ ವಾಹನಕ್ಕೆ (V2V) ಸಂವಹನ ವ್ಯವಸ್ಥೆಗಳನ್ನು (V2V Tech Revolution) ಪರಿಚಯಿಸುವ ನಿಟ್ಟಿನಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನೂತನ ಕ್ರಮವನ್ನು ತಂದಿದೆ. ಈ ಯೋಜನೆ 2026 ರ ವೇಳೆಗೆ ಇದನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ. ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. V2V ತಂತ್ರಜ್ಞಾನವು ರಸ್ತೆಗಳಲ್ಲಿ ವಾಹನಗಳ ಸುರಕ್ಷತೆಗೆ ಸಂಬಂಧಿಸಿದ ಮಾಹಿತಿಯನ್ನು ನೇರವಾಗಿ ಪರಸ್ಪರ ವಿನಿಮಯ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಸಂವಹನವು ಮೊಬೈಲ್ ನೆಟ್‌ವರ್ಕ್‌ಗಳು ಅಥವಾ ಇಂಟರ್ನೆಟ್ ಸಂಪರ್ಕವಿಲ್ಲದೆ, ಬದಲಾಗಿ, ವಾಹನಗಳು ಸ್ಥಳೀಯವಾಗಿ ಅಲ್ಪ-ಶ್ರೇಣಿಯ ವೈರ್‌ಲೆಸ್ ಸಿಗ್ನಲ್‌ಗಳನ್ನು ಬಳಸಿಕೊಂಡು ಸಂವಹನ ನಡೆಸುತ್ತವೆ. ನೆಟ್‌ವರ್ಕ್ ಇಲ್ಲದ ಪ್ರದೇಶಗಳಲ್ಲಿಯೂ ಸಹ ಈ ವ್ಯವಸ್ಥೆಯು ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಭಿವೃದ್ಧಿಪಡಿಸುತ್ತಿರುವ ಚೌಕಟ್ಟಿನ ಅಡಿಯಲ್ಲಿ, ವಾಹನಗಳಿಗೆ ಮೀಸಲಾದ ಹಾರ್ಡ್‌ವೇರ್ ಮಾಡ್ಯೂಲ್ ಅಳವಡಿಸಲಾಗುವುದು. ಇದು ಹತ್ತಿರದ ಸಂಚಾರದೊಂದಿಗೆ ಅಲ್ಪ-ಶ್ರೇಣಿಯ ಸಂವಹನ ನಡೆಸುತ್ತದೆ. ಇದು ವಾಹನಗಳು ವ್ಯಾಪ್ತಿಯಲ್ಲಿರುವವರೆಗೆ ನೈಜವಾಗಿ ಕಾರ್ಯನಿರ್ವಹಿಸುತ್ತದೆ. ಇದರ ವಿನಿಮಯವಾಗುವ ಡೇಟಾ ಸೀಮಿತವಾಗಿರುತ್ತದೆ. ಇದು ಮುಂದೆ ಇರುವ ಅಪಾಯಕಾರಿ ಪರಿಸ್ಥಿತಿಯನ್ನು ಗುರುತಿಸುತ್ತದೆ. ಉದಾಹರಣೆಗೆ, ಮುಂದಿರುವ ವಾಹನವು ವೇಗವಾಗಿ ಬರುತ್ತಿದ್ದರೆ, ಅದನ್ನು ನಿಧಾನವಾಗಿಸುವಂತೆ ಸೂಚಿಸುತ್ತದೆ. ಒಂದು ವೇಳೆ ಚಾಲಕನ ನಿಯಂತ್ರಣ ತಪ್ಪಿ ವೇಗವಾಗಿ ಬಂದರೆ ಅದನ್ನು ತಡೆಯುವುದಿಲ್ಲ. ಆದರೆ ಮೊದಲೇ ಈ ಬಗ್ಗೆ ಸೂಚನೆಯನ್ನು ನೀಡುತ್ತದೆ.

ಸಚಿವಾಲಯದ ದೃಷ್ಟಿಕೋನದ ಪ್ರಕಾರ, V2Vಯು ವಾಹನಗಳಿಗೆ ಮುಖ್ಯವಾಗಿರುತ್ತದೆ. ಹಲವು ಅಪಾಯಗಳನ್ನು ತಡೆಯುತ್ತದೆ. ಬ್ರೇಕ್ ಫೇಲ್, ವೇಗವಾಗಿ ಬರುವುದು, ಇತರ ಅಪಾಯಕಾರಿ ವಿಚಾರಗಳ ಬಗ್ಗೆ ಸೂಚನೆಯನ್ನು ನೀಡುತ್ತದೆ. ಈ ವ್ಯವಸ್ಥೆಗೆ ತಾಂತ್ರಿಕ ಮಾನದಂಡಗಳು ಮತ್ತು ಸಂವಹನ ಪ್ರೋಟೋಕಾಲ್‌ಗಳನ್ನು ಅಂತಿಮಗೊಳಿಸುವ ಉದ್ದೇಶದಿಂದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಕಾರಿಗಳು ವಾಹನ ತಯಾರಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ತಕ್ಷಣದಲ್ಲಿ ಈ ನಿಯಮ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ದೇಶಾದ್ಯಂತ ಈ ಬಗ್ಗೆ ಕಾರ್ಯಚರಣೆ ಹಾಗೂ ಅಭಿಯಾನವನ್ನು ನಡೆಸಲಾಗುವುದು ಎಂದು ಸಚಿವಾಲಯ ಹೇಳಿದೆ. ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ವಿಶ್ವಾಸಾರ್ಹ ಕಾರ್ಯಾಚರಣೆ ಮಾಡುತ್ತದೆ ಎಂದು ಹೇಳಲಾಗಿದೆ.

ಇನ್ನು ಇದನ್ನು ವಾಹನದಲ್ಲಿ ಅಳವಡಿಸಲು ಆಗುವ ವೆಚ್ಚದ ಬಗ್ಗೆ ನಿಖರವಾಗಿ ತಿಳಿಸಿಲ್ಲ. ಆದರೆ ಹೆಚ್ಚುವರಿ ಹಾರ್ಡ್‌ವೇರ್ ಪ್ರತಿ ವಾಹನಕ್ಕೆ ಕೆಲವು ಸಾವಿರ ರೂಪಾಯಿ ಆಗಬಹುದು ಎಂದು ಹೇಳಲಾಗಿದೆ. ಈ ವ್ಯವಸ್ಥೆಯು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳಂತಹ ಅಸ್ತಿತ್ವದಲ್ಲಿರುವ ಸುರಕ್ಷತಾ ತಂತ್ರಜ್ಞಾನಗಳ ಜೊತೆಗೆ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ. ಈಗಾಗಲೇ ಹಲವು ವಾಹಳಲ್ಲಿ ಕ್ಯಾಮರ ಹಾಗೂ ಇತರ ಎಚ್ಚರಿಕೆ ಧ್ವನಿವರ್ಧಕಗಳನ್ನು ಬಳಸುವ ಬದಲು ಈ ತಂತ್ರಜ್ಞಾನವನ್ನು ಬಳಸುವುದು ಉತ್ತಮ ಎಂದು ಹೇಳಲಾಗಿದೆ. ಪ್ರತಿ ವರ್ಷವೂ ರಸ್ತೆ ಅಪಘಾತಗಳು ಹೆಚ್ಚುತ್ತ ಇದೆ . ಇದನ್ನು ತಡೆಯಲು ಸರ್ಕಾರದ ದೃಷ್ಟಿಕೋನದಿಂದ, V2V ಸಂವಹನವು ಸಾಧನ ತರಲಾಗಿದೆ.


Share with

Leave a Reply

Your email address will not be published. Required fields are marked *