ಜೂ.5 ರಿಂದ 7ರ ವರೆಗೆ ಕಾಸರಗೋಡಿನಲ್ಲಿ ಆರೆಂಜ್ ಅಲರ್ಟ್; ಮೀನುಗಾರಿಕೆ ನಿಷೇಧ

Share with

ಕಾಸರಗೋಡು: ಕಾಸರಗೋಡು ಸಹಿತ ರಾಜ್ಯದ ಏಳು ಜಿಲ್ಲೆಗಳಲ್ಲಿ ಜೂ.5 ರಿಂದ 7ರ ವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಕಾಸರಗೋಡು, ಕಣ್ಣೂರು, ವಯನಾಡು, ಕಲ್ಲಿಕೋಟೆ, ಮಲಪ್ಪುರಂ, ಪಾಲ್ಫಾಟ್ ಮತ್ತು ತೃಶೂರು ಜಿಲ್ಲೆಗಳಲ್ಲಿ ಕೇಂದ್ರ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.

ಮೀನುಗಾರಿಕೆ ನಿಷೇಧ: ಕೇರಳದಲ್ಲಿ ಜೂ. 9ರ ಮಧ್ಯರಾತ್ರಿಯಿಂದ ಜು. 31ರಮಧ್ಯರಾತ್ರಿ ವರೆಗೆ ಯಾಂತ್ರೀಕೃತ ದೋಣಿಗಳು ಹಾಗೂ ಆಳ ಸಮುದ್ರ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಇತರ ರಾಜ್ಯಗಳ ಬೋಟುಗಳು ಜೂ. 9ರ ಒಳಗೆ ಕೇರಳದಿಂದ ತೆರಳಬೇಕು. ನಿಯಮ ಉಲ್ಲಂ ಸುವ ದೋಣಿಗಳ ವಿರುದ್ಧ ಕಠಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಡಿಎಂ ಕೆ.ವಿ. ಶ್ರುತಿ ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *