ನಗರದಲ್ಲಿ ಪೊಲೀಸ್ ಕ್ಷಿಪ್ರ ಕಾರ್ಯಾಚರಣಾ ಪಡೆಯಿಂದ ಪಥ ಸಂಚಲನ

Share with

ಕಾಸರಗೋಡು: ಜಿಲ್ಲೆಯಲ್ಲಿ ಡಿ. 11ರಂದು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಯಲಿರುವಂತೆಯೇ ಭದ್ರತಾ ಕ್ರಮದಂಗವಾಗಿ ಕಾಸರಗೋಡು ನಗರದಲ್ಲಿ ನಿನ್ನೆ ಪೊಲೀಸರು ಮತ್ತು ಕ್ಷಿಪ್ರ ಕಾರ್ಯಾಚರಣಾ ಪಡೆ ತಂಡದಿಂದ (ರಾಪಿಡ್ ಆಕ್ಷನ್ ಪೋರ್ಸ್) ಜಂಟಿಯಾಗಿ ಪಥ ಸಂಚಲನ ನಡೆಸಲಾಯಿತು. ನಗರದ ಹಳೆ ಸೂರ್ಲುನಿಂದ ಆರಂಭಗೊಂಡ ಪಥಸಂಚಲನ, ಹೊಸ ಬಸ್ ನಿಲ್ದಾಣ, ಹಳೇ ಬಸ್ ನಿಲ್ದಾಣ ಸೇರಿದಂತೆ ನಗರ ಪ್ರಧಾನ ರಸ್ತೆಗಳ ಮೂಲಕ ಈ ಪಥಸಂಚಲನ ನಡೆಸಲಾಯಿತು. ಇದರ ಹೊರತಾಗಿ ಹೊಸದುರ್ಗದಲ್ಲೂ ಪಥ ಸಂಚಲನ ನಡೆಸಲಾಯಿತು.


Share with

Leave a Reply

Your email address will not be published. Required fields are marked *