ಸಿಡಿಲಾಘಾತಕ್ಕೆ ಪುತ್ತೂರಿನ ಆ್ಯಡ್ ಲ್ಯಾಬ್ ಸ್ಟುಡಿಯೋ ಸುಟ್ಟು ಭಸ್ಮ!

Share with

ಸಿಡಿಲಿನ ಹೊಡೆತಕ್ಕೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಫೋಟೊ ಸ್ಟೂಡಿಯೋ ಸುಟ್ಟು ಭಸ್ಮವಾಗಿದೆ.

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸಿಡಿಲಿನ ಹೊಡೆತಕ್ಕೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಫೋಟೊ ಸ್ಟೂಡಿಯೋ ಸುಟ್ಟು ಭಸ್ಮವಾದ ಘಟನೆ ನಡೆದಿದೆ.

ಪುತ್ತೂರಿನ ಜಿಎಲ್ ಕಾಂಪ್ಲೆಕ್ಸ್ ನಲ್ಲಿರುವ ಆ್ಯಡ್ ಲ್ಯಾಬ್ ಪೋಟೋ ಸ್ಟುಡಿಯೋ ಸಿಡಿಲು ಬಡಿದು ಸುಟ್ಟು ಭಸ್ಮವಾದರೂ ಅಲ್ಲೇ ಇದ್ದ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ. ಸಿಡಿಲಿನ ಹೊಡೆತಕ್ಕೆ ಸ್ಟುಡಿಯೋದಲ್ಲಿನ ಕಂಪ್ಯೂಟರ್ ಸಿಸ್ಟಂ, ಫೋಟೊ ಮೆಷಿನರಿ, ಪ್ಯಾನ್, ಫೋಟೊ ಆಲ್ಬಂ, ಇನ್ನಿತರ ವಸ್ತುಗಳು ಸುಟ್ಟು ಕರಕಲಾಗಿವೆ.

ಪೊನ್ನಪ್ಪ ಎಂಬವರಿಗೆ ಸ್ಟುಡಿಯೋ ಸೇರಿದಾಗಿದ್ದು ಸುಮಾರು 6 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಗ್ರಾಹಕರಿಗೆ ನೀಡಬೇಕಾಗಿದ್ದ ಹಲವು ಮದುವೆ ಆಲ್ಬಂಗಳು ಸುಟ್ಟು ಭಸ್ಮವಾಗಿದೆ ಎಂದು ತಿಳಿದು ಬಂದಿದೆ.

ಅಕ್ಕ-ಪಕ್ಕದ ಅಂಗಡಿಯವರು ಹಾಗೂ ಸ್ಥಳೀಯರು ಬಂದು ಬೆಂಕಿ ನಂದಿಸಲು ಸಹಕರಿಸಿದ್ದಾರೆ. ಘಟನೆಯ ಮಾಹಿತಿ ಪಡೆದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.


Share with

Leave a Reply

Your email address will not be published. Required fields are marked *