
ಬಂಟ್ವಾಳ : ಬಂಟ್ವಾಳ ತಾಲೂಕು, ನರಿಕೊಂಬು ಗ್ರಾಮದ ಕರ್ಬೆಟ್ಟು ಪಾಂಡಿ ಪೂಜಾರಿ ಕುಟುಂಬಸ್ಥರ ನಾಗಬನ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂಪಾಯಿ 25,000 ₹ ಅನುದಾನ ಮಂಜೂರಾತಿ ಗೊಂಡಿದ್ದು ಇದರ ಡಿ ಡಿ ಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತುಂಬೆ ವಲಯದ ಮೇಲ್ವಿಚಾರಕಿ ಶ್ರೀಮತಿ ಮಮತಾ ಸಂತೋಷ್ ರವರು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಹಸ್ತಾಂತರಿಸಿದರು .
ಈ ಸಂದರ್ಭ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಜಗನ್ನಾಥ ಸುವರ್ಣ ಕಾರ್ಯದರ್ಶಿ ಉಮಾನಾಥ ಸುವರ್ಣ,ಕೋಶಾಧಿಕಾರಿ ಜಯ ಸುವರ್ಣ, ಸದಸ್ಯರಾದ ವಸಂತ ಸುವರ್ಣ ಹಾಗೂ ಧನಂಜಯ ಸುವರ್ಣ, ನರಿ ಕೊಂಬು ಬಿ ಒಕ್ಕೂಟದ ಅಧ್ಯಕ್ಷರಾದ ಜಯಂತ ಸೇವಾ ಪ್ರತಿನಿಧಿಗಳಾದ ಪ್ರತಿಭಾ ಮತ್ತು ಕುಸುಮಾವತಿ ಉಪಸ್ಥಿತರಿದ್ದರು.