
ಪೆರ್ಮುದೆ: ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕಿ [ದಿ] ನೇರೋಳು ನಿಡುವಜೆ ಸುಬ್ಬಣ್ಣ ಭಟ್ ರವರ ಪತ್ನಿ ಶಾರದಾ ಅಮ್ಮ. ಎನ್ [ 76] ಕೆಲವು ದಿನಗಳ ಹಿಂದೆ ಕಾಸರಗೋಡಿನ ಖಾಸಾಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ಇವರು ಬುಧವಾರ ಸಂಜೆ ನಿಧನ ಹೊಂದಿದರು. ಮೃತರು ಮಕ್ಕಳಾದ ಎಸ್.ಡಿ.ಪಿ.ಎಚ್.ಎಸ್.ಎಸ್ ಪ್ರಾಂಶುಪಾಲ ಎನ್.ರಾಮಚಂದ್ರ ಭಟ್, ಯು.ಪಿ ಶಾಲಾ ಮುಖ್ಯೋಪಾಧ್ಯಾಯ ಎನ್.ಮಹಾಲಿಂಗ ಭಟ್, ಮ್ಯಾನೇಜರ್ ಶಂಕರನಾರಾಯಣ ಭಟ್, ನಿವೃತ್ತ ಶಿಕ್ಷಕಿ ರೇವತಿ, ಪರಮೇಶ್ವರಿ ಅಮ್ಮ, ಶಾಲಾ ಶಿಕ್ಷಕಿ ಗಂಗಮ್ಮ, ಸೊಸೆಯಂದಿರಾದ ವಿದ್ಯಾಸರಸ್ವತಿ, ವಿಜಯಶ್ರೀ, ಉಷಾಪದ್ಮ, ಅಳಿಯಂದಿರಾದ ಶಂಕರ್ ರಾವ್, ಭಾಸ್ಕರ ಉಪಾಧ್ಯಾಯ, ರವಿಶಂಕರ, ಸಹೋದರ ಯಕ್ಷಗಾನ ಕಲಾವಿದ ಕೊಕ್ಕಡ ಈಶ್ವರ ಭಟ್ ಸಹಿತ ಇತರ ಸಹೋದರರು, ಸಹೋದರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.