ಪಾಕಿಸ್ತಾನದಲ್ಲಿ 5.4 ತೀವ್ರತೆಯ ಭಾರೀ ಭೂಕಂಪ

Share with

ಪಾಕಿಸ್ತಾನದ ಹಲವು ಭಾಗಗಳಲ್ಲಿ ಇಂದು 5.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟ‌ರ್ ವರದಿ ಮಾಡಿದೆ. ಈ ಭೂಕಂಪವು ಭೂಮಿಯ ಸುಮಾರು 35 KM ಆಳದಲ್ಲಿ ಸಂಭವಿಸಿದೆ.

ಬರ್ಖಾನ್, ತೌನ್ಸಾ, ಕೊಗ್ಗು, ಡೇರಾ ಗಾಜಿ ಖಾನ್, ಝೂಬ್, ಕೋಟ್ ಅಡ್ಡು ಮತ್ತು ಲಯ್ಯಾ ಸೇರಿದಂತೆ ಹಲವು ಪಟ್ಟಣಗಳು ಹಾಗೂ ನಗರಗಳ ನಿವಾಸಿಗಳು ತೀವ್ರ ಭೂಕಂಪನದ ಅನುಭವವಾಗಿರುವುದಾಗಿ ತಿಳಿಸಿದ್ದಾರೆ. ಭೀತಿಯಿಂದ ಜನರು ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ.


Share with

Leave a Reply

Your email address will not be published. Required fields are marked *