ಶಾಲೆಯ ವಸ್ತುಗಳನ್ನು ಕದಿಯುತ್ತಿದ್ದ ಕಳ್ಳನನ್ನು ಹಿಡಿದು ಕೊಟ್ಟ ಶಿಕ್ಷಕರು!

Share with

ಕೊಂಬೆಟ್ಟು ಸರಕಾರಿ ಶಾಲೆಯಿಂದ ವಸ್ತುಗಳನ್ನು ಕದಿಯುತ್ತಿದ್ದ ಕಳ್ಳ.

ಪುತ್ತೂರು: ಕೊಂಬೆಟ್ಟು ಸರಕಾರಿ ಶಾಲೆಯಿಂದ ವಸ್ತುಗಳನ್ನು ಕದಿಯುತ್ತಿದ್ದ ಕಳ್ಳನನ್ನು ಶಿಕ್ಷಕರೇ ಹಿಡಿದ ಘಟನೆ ನಡೆದಿದೆ.

ಪುತ್ತೂರು ಕೊಂಬೆಟ್ಟು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀರು ಕುಡಿಯಲು ಇರಿಸಿದ್ದ ಡ್ರಮ್, ಇತರ ಸ್ಟೀಲ್ ಮತ್ತು ಪ್ಲಾಸ್ಟಿಕ್ ವಸ್ತುಗಳು ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗುತ್ತಿದ್ದವು.

ಶಾಲೆಯ ಉಪಪ್ರಾಂಶುಪಾಲರು ಸಿ.ಸಿ ಟಿವಿಯನ್ನು ವೀಕ್ಷಿಸಿದಾಗ ಒಬ್ಬ ವ್ಯಕ್ತಿಯು ಕಳ್ಳತನ ಮಾಡುವುತ್ತಿರುವ ದ್ರಶ್ಶವು ಬೆಳಕಿಗೆ ಬಂದಿದ್ದು, ಈ ವಿಷಯದ ಬಗ್ಗೆ ಶಾಲೆಯ ಶಿಕ್ಷಕರಿಗೆ, ಎಸ್‌ಡಿಎಂಸಿ ಮತ್ತು ನಗರಸಭಾ ಸ್ಥಳೀಯ ಸದಸ್ಯರಿಗೆ ಹಾಗೂ ಪೊಲೀಸರಿಗೆ ಮಾಹಿತಿಯನ್ನು ತಿಳಿಸಲಾಗಿತ್ತು. ಅ.5ರಂದು ಸ್ಟೀಲ್ ಡ್ರಮ್ ಕದ್ದೊಯ್ದ ವ್ಯಕ್ತಿಯು ಶಾಲೆಯ ಆವರಣದಲ್ಲಿ ಓಡಾಡುತ್ತಿರುವುದನ್ನು ಗಮನಿಸಿದ ಉಪಪ್ರಾಂಶುಪಾಲರು ಮತ್ತು ಶಿಕ್ಷಕರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.


Share with

Leave a Reply

Your email address will not be published. Required fields are marked *