ಕಾಸರಗೋಡು: ವೀರ ಸಾವರ್ಕರ್ ಫ್ರೆಂಡ್ಸ್, ಸಾವರ್ಕರ್ ಜಂಕ್ಷನ್, ತಾಳಿಪಡ್ಪು, ಕಾಸರಗೋಡು ಇದರ ವತಿಯಿಂದ ಅ.21 ಬುಧವಾರ ವಿಜಯ ದಶಮಿಯಂದು ಬೆಳಗ್ಗೆ 10 ಗಂಟೆಗೆ ಕಾಸರಗೋಡಿನ ಕೇಳುಗುಡ್ಡೆ ತತ್ತ್ವಮಸಿ ಸಭಾ ಮಂಟಪದ ಅಯ್ಯಪ್ಪ ನಗರದಲ್ಲಿ ಆಯುಧ ಪೂಜೆ ಹಾಗೂ ವಿದ್ಯಾರಂಭ ಕಾರ್ಯಕ್ರಮ ನಡೆಯಲಿದೆ.
ಹಿಂದೂ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಎಲ್ಲಾ ವಿಧದ ಸಹಾಯ-ಸಹಕಾರಗಳನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೂಚನೆ: ವಿದ್ಯಾರಂಭಕ್ಕಾಗಿ ಮಕ್ಕಳನ್ನು ಕರೆತರುವವರು ಅ.20ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಆಯುಧ ಪೂಜೆಗಾಗಿ ಭಕ್ತರು ತಮ್ಮ ವಾಹನಗಳು ಹಾಗೂ ಕೆಲಸದ ಸಾಮಗ್ರಿಗಳನ್ನು ತರಬಹುದಾಗಿದೆ ಎಂದು ಸಂಘಟನೆ ಪ್ರಕಟಣೆಯಲ್ಲಿ ತಿಳಿಸಿದೆ.





