ಗ್ರಾನೈಟ್ ಬಿದ್ದು ಇಬ್ಬರು ಕಾರ್ಮಿಕರು ಸಾವು

Share with

ಉಡುಪಿ: ಕಂಟೇನರ್ ಲಾರಿಯಲ್ಲಿದ್ದ ಗ್ರಾನೈಟ್ ಇಳಿಸುವಾಗ ಆಕಸ್ಮಿಕವಾಗಿ ಗ್ರಾನೈಟ್ ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಮಲ್ಪೆಯ ತೊಟ್ಟಂ ಎಂಬಲ್ಲಿ ನಡೆದಿದೆ.

ಮೃತರನ್ನು ಒರಿಸ್ಸಾ ಮೂಲದ ಬಾಬುಲ್ಲ (೩೮) ಹಾಗೂ ಭಾಸ್ಕರ್ (೪೦) ಎಂದು ಗುರುತಿಸಲಾಗಿದ್ದು, ತೊಟ್ಟಂ ನಲ್ಲಿ ಹೊಸದಾಗಿ ನಿರ್ಮಾಣ ಮಾಡುತ್ತಿರುವ ಮನೆಗೆ ಗ್ರಾನೈಟ್ ತರಲಾಗಿತ್ತು. ಕಂಟೇನರ್ ಲಾರಿಯಲ್ಲಿದ್ದ ಗ್ರಾನೈಟ್ ಇಳಿಸುವಾಗ ಆಕಸ್ಮಿಕವಾಗಿ ಗ್ರಾನೈಟ್ ಬಿದ್ದು ಗಂಭೀರ ಗಾಯಗೊಂಡ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮಲ್ಪೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆಯನ್ನು ನಡೆಸಿದ್ದಾರೆ ಹಾಗೂ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.


Share with

Leave a Reply

Your email address will not be published. Required fields are marked *