ಕೇರಳ ರಾಜ್ಯದ 13ನೇ ಮುಖ್ಯಮಂತ್ರಿಯಾಗಿ ವಿ.ಡಿ ಸತೀಶನ್ ಆಯ್ಕೆ

Share with

ತಿರುವನಂತಪುರ : ಈ ಬಾರಿಯ ಕೇರಳ ವಿಧಾನ ಸಭೆಯಲ್ಲಿ ಬಹುಮತ ಗಳಿಸಿಕೊಂಡು ಅಧಿಕಾರಕ್ಕೆ ಬಂದ ಐಕ್ಯರಂಗ ಬಹು ಸಮಯದ ಚರ್ಚೆಯ ಬಳಿಕ ಮುಖ್ಯಮಂತ್ರಿ ಆಯ್ಕೆ ಹೈಕಮಾಂಡ್ ನಡೆಸಿ ಕಳೆದ ವಿಪಕ್ಷ ನಾಯಕ ವಿ.ಡಿ.ಸತೀಶರನ್ನು 13ನೇ ಮುಖ್ಯಮಂತ್ರಿಯಾಗಿ ಘೋಷಿಸಿದೆ. ಎಐಸಿಸಿ ಪ್ರಮುಖರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ದೆಹಲಿಯಲ್ಲಿ ನಡೆದ ಆಯ್ಕೆ ಕ್ರಮದ ಬಳಿಕ ಇಂದು ಮಧ್ಯಾಹ್ನ 12 ಗಂಟೆಗೆ ದೆಹಲಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ದೀಪಾದಾಸ್ ಮುನ್ಶಿ ನೂತನ ಮುಖ್ಯ ಮಂತ್ರಿಯನ್ನು ಘೋಷಿಸಿದರು. ಜಯರಾಮ್ ರಮೇಶ್ ಮೊದಲಾದ ನೇತಾರರು ಘೋಷ್ಠಿಯಲ್ಲಿದ್ದರು.

ಕೇರಳದಲ್ಲಿ ಐಕ್ಯರಂಗ ಬಹುಮತ ಸಾಬೀತುಗೊಂಡ ಬಳಿಕ ಕೆ.ಸಿ.ವೇಣುಗೋಪಾಲ್‌, ವಿ.ಡಿ.ಸತೀಶನ್, ರಮೇಶ್ ಚೆನ್ನಿತ್ತಲ ಎಂಬ ಮೂವರು ಪ್ರಮುಖ ನಾಯಕರ ಹೆಸರು ಮುಖ್ಯಮಂತ್ರಿ ಗಾದಿಗೆ ಸೂಚಿತವಾಗಿತ್ತು. ಅದರಲ್ಲೂ ಕೆ.ಸಿ.ವೇಣುಗೋಪಾಲ್ ಗೆ ಶಾಸಕರ ಹೆಚ್ಚಿನ ಬೆಂಬಲ ಕ೦ಡು ಬ೦ದಿತ್ತು. ಬಳಿಕ ವಿ.ಡಿ.ಸತೀಶನ್‌ ಬೆಂಬಲಿಗರು ಮುಖ್ಯಮಂತ್ರಿ ಪದವಿ ಆಗ್ರಹಿಸಿ ಬೀದಿಗಿಳಿದಿದ್ದು ಇದೀಗ ನಾಟಕೀಯ ಸನ್ನಿವೇಶಕ್ಕೆ ಅಂತಿಮ ತೆರೆ ಬಿದ್ದು ಮುಖ್ಯಮಂತ್ರಿ ಪದವಿಗೆ ವಿ.ಡಿ.ಸತೀಶನ್ ಅವರ ಹೆಸರು ಘೋಷಣೆಯಾಗಿದೆ.

ವಡಕ್ಕೇರಿ ದಾಮೋದರನ್ ಸತೀಶನ್ ಎಂಬ ಅಪ್ರತಿಮ ಕಾಂಗ್ರೆಸ್‌ ನಾಯಕ ಕಳೆದ ವಿಪಕ್ಷ ನೇತಾರನಾಗಿ ತನ್ನ ಸ್ಪಷ್ಟ ನಿಲುವು, ದುರಾಡಳಿತಕ್ಕೆದುರಾಗಿ ಹೋರಾಟ ನಡೆಸಿದ್ದು ಗಮನಾರ್ಹವಾಗಿತ್ತು.

ಈ ಬಾರಿ ಅಧಿಕಾರದ ಚುಕ್ಕಾಣಿ ಇವರಿಗೆ ನೀಡಬೇಕೆಂಬುದು ಬಹುಜನ ಆಶಯವಾಗಿತ್ತು. ವಿ.ಡಿ.ಸತೀಶನ್ ಅವರು ಕೆ. ದಾಮೋದರ ಮೆನನ್ ಮತ್ತು ವಿ. ವಿಲಾಸಿನಿ ಅಮ್ಮ ದಂಪತಿಗಳ ಪುತ್ರನಾಗಿ ಕೊಚ್ಚಿಯ ನೆಟ್ಟೂರಿನಲ್ಲಿ 31 ಮೇ 1964 ರಂದು ನಾಯ‌ರ್ ಕುಟುಂಬದಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಣಂಗಾಡ್‌ ಹೈಸ್ಕೂಲ್‌ನಿಂದ ಪೂರ್ಣಗೊಳಿಸಿದ ಅವರು ತೇವರದ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಪದವಿ ಪಡೆದರು ಮತ್ತು ರಾಜಗಿರಿ ಕಾಲೇಜ್ ಆಫ್ ಸೋಶಿಯಲ್ ಸೈನ್ಸಸ್‌ನಿಂದ ಸಮಾಜ ಕಾರ್ಯದಲ್ಲಿ (MSW) ಸ್ನಾತಕೋತ್ತರ ಪದವಿ, ನಂತರ ಕೇರಳ ಲಾ ಅಕಾಡೆಮಿಯ ಕಾನೂನು ಕಾಲೇಜಿನಲ್ಲಿ ತಮ್ಮ ಬ್ಯಾಚುಲರ್ ಆಫ್ ಲಾಸ್ (LLB) ಮತ್ತು ತಿರುವನಂತಪುರದ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಮಾಸ್ಟರ್ ಆಫ್ ಲಾಸ್ (LLM) ಅನ್ನು ಪೂರ್ಣಗೊಳಿಸಿ ವಕೀಲಿ ವೃತ್ತಿಗೇರಿದರು.ಸರಿಸುಮಾರು 10 ವರ್ಷಗಳ ಕಾಲ, ಕೇರಳ ಉಚ್ಚ ನ್ಯಾಯಾಲಯದಲ್ಲಿ ವಕೀಲಿ ವೃತ್ತಿಯನ್ನು ನಡೆಸಿದ ಸತೀಶನ್ ಅವರು ಆರ್ ಲಕ್ಷ್ಮಿಪ್ರಿಯಾ ಎಂಬರನ್ನು ವಿವಾಹಿತರಾಗಿ ಉನ್ನಿ ಮಾಯ ಎಂಬ ಪುತ್ರಿಯ ಜತೆ ಸಂತೃಪ್ತ ಸಂಸಾರ ಕಂಡುಕೊಂಡರು. 1996 ರಲ್ಲಿ ಕಮ್ಯುನಿಸ್ಟ್ ಭದ್ರಕೋಟೆಯಾಗಿದ್ದ ಪರವೂರಿನಿಂದ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿ ಪಿ.ರಾಜು ಅವರನ್ನು ಸೋಲಿಸಿ ವಿ.ಡಿ.ಸತೀಶನ್‌ ಅವರ ರಾಜಕೀಯ ಚೊಚ್ಚಲ ಪ್ರವೇಶವಾಯಿತು.


Share with

Leave a Reply

Your email address will not be published. Required fields are marked *