Coconut Oil: ತ್ವಚೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದಾಗುವ ಉಪಯೋಗಗಳ ಬಗ್ಗೆ ತಿಳಿಯಿರಿ

Share with

ತೆಂಗಿನ ಎಣ್ಣೆ ಹೈಡ್ರೇಟಿಂಗ್ ಗುಣಲಕ್ಷಣಗಳು ಮತ್ತು ಪೋಷಕಾಂಶಗಳಿಂದ ಕೂಡಿದೆ. ತೆಂಗಿನ ಎಣ್ಣೆ ಕೇವಲ ಅಡುಗೆಗೆ ಬಳಕೆಯಾಗುವುದು ಮಾತ್ರವಲ್ಲದೇ  ತ್ವಚೆಯ ಸೌಂದರ್ಯಕ್ಕೂ ಅಗತ್ಯವಾಗಿ ಬಳಕೆಯಾಗುತ್ತದೆ.

ನಿಮ್ಮ ಮುಖಕ್ಕೆ ನೈಸರ್ಗಿಕ ಮಾಯಿಶ್ಚರೈಸರ್ ಹುಡುಕುತ್ತಿದ್ದಿರಾ? ಹಾಗಿದ್ದರೆ ತ್ವಚೆಯ ರಕ್ಷಣೆಗೆ ತೆಂಗಿನ ಎಣ್ಣೆಯನ್ನೊಮ್ಮೆ ಉಪಯೋಗಿಸಿ ನೋಡಿ.

ತೆಂಗಿನ ಎಣ್ಣೆಯಲ್ಲಿರುವ ಕೊಬ್ಬಿನಾಮ್ಲಗಳು ಚರ್ಮವನ್ನು ಆಳವಾಗಿ ಹೈಡ್ರೇಟ್ ಮಾಡುತ್ತದೆ ಮತ್ತು ಪೋಷಿಸುತ್ತದೆ. ನಿಮಗೆ ಮೇಕಪ್ ರಿಮೂವರ್ ಅಗತ್ಯವಿದೆಯೇ? ತೆಂಗಿನ ಎಣ್ಣೆ ಮೇಕ್ಅಪ್ ಸುಲಭವಾಗಿ ತೆಗೆಯಲು ಸಹಾಯ ಮಾಡುತ್ತದೆ. ತ್ವಚೆಯನ್ನು ಸ್ವಚ್ಛ ಹಾಗೂ ಮೃದುವಾಗಿಡಲು ತೆಂಗಿನ ಎಣ್ಣೆ ಉಪಯುಕ್ತವಾಗಿದೆ.
ತೆಂಗಿನ ಎಣ್ಣೆ ನೈಸರ್ಗಿಕ ಲಿಪ್ ಬಾಮ್ ಆಗಿಯೂ ಉಪಯೋಗಿಸಬಹುದು. ತೆಂಗಿನೆಣ್ಣೆ ತ್ವಚೆಯ ಅಗತ್ಯಗಳಿಗಾಗಿ ಆಲ್ ಇನ್ ಒನ್ ಪರಿಹಾರವಾಗಿದೆ.


Share with

Leave a Reply

Your email address will not be published. Required fields are marked *