ಕಾಸರಗೋಡು : ಸೇವಾ ಭಾರತಿ ಕಾರಡ್ಕ ಮಂಡಲ, ಜಗನ್ಮಾತ ಆಸ್ಪತ್ರೆ, ಕೌಮುದಿ ನೇತ್ರಾಲಯ ಮತ್ತು ಅನ್ವಿತಾ ಟ್ರಸ್ಟ್ ಸಹಕಾರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಮುಳ್ಳೇರಿಯಾದ ಗಣೇಶ ಕಲಾ ಮಂದಿರ ಜರಗಿತು.
ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸೇವಾ ಭಾರತಿ ಕಾರಡ್ಕ ಮಂಡಲದ ಅಧ್ಯಕ್ಷ ಚಂದ್ರ ಎಸಿಬಿ ಅವರು ಅದ್ಯಕ್ಷತೆ ವಹಿಸಿದರು. ಸುನೀಲ್ ಕುಮಾರ್ ಬಾಳಕಂಡ (ಸಾಮಾಜಿಕ ಕಾರ್ಯಕರ್ತರು) ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಘುನಾಥ್ ಕೂಡ್ಲು ಜಿಲ್ಲಾ ಸಹಸೇವಾ ಪ್ರಮುಖ್ ಮತ್ತು ದಯಾನಂದ ಭಟ್ ಸೇವಾಭಾರತಿ ಜಿಲ್ಲಾ ಆರೋಗ್ಯ ಆಯೋಗ್ ಪ್ರಮುಖ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಜಗನ್ಮಾತಾ ಆಸ್ಪತ್ರೆ ಎಂ.ಡಿ ಸತ್ಯನಾರಾಯಣ ಪ್ರಸಾದ್ ಮತ್ತು ಡಾ. ಸುನಿಲ್ ಕೌಮುದಿ ನೇತ್ರಾಲಯ ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ.ಮನೋಜ್ ಕೃಷ್ಣ, ಡಾ.ಅನಿರುದ್ಧ್, ಡಾ. ಬಾಲಕೃಷ್ಣ, ಡಾ.ಕಾವ್ಯ ಕೆವಿ ತಪಾಸಣೆಗೆ ಸಹಕಾರ ನೀಡಿದರು.
165 ಜನರಿಂದ ನೇತ್ರ ತಪಾಸಣೆ:

ಈ ಸಂದರ್ಭದಲ್ಲಿ ನಡೆದ ನೇತ್ರ ತಪಾಸಣೆಯಲ್ಲಿ ಸುಮರು 165 ಮಂದಿ ನೇತ್ರ ತಪಾಸಣೆ ನಡೆಸಿದರು. ಜಗನ್ಮಾತ ಆಸ್ಪತ್ರೆ ವತಿಯಿಂದ ನಡೆದ ಸಾಮಾನ್ಯ ರೋಗ ವಿಭಾಗ, ಶ್ವಾಸಕೋಶ ವಿಭಾಗ, ಸ್ತ್ರೀ ರೋಗ ವಿಭಾಗದಲ್ಲಿ ಸುಮರು 85 ಮಂದಿ ತಪಾಸಣೆ ನಡೆಸಿದರು. ಈ ಕಾರ್ಯಕ್ರಮದಲ್ಲಿ ಬ್ರಿಜೇಶ್ ಸ್ವಾಗತಿಸಿ ಸೌಜನ್ಯ ವಂದಿಸಿದರು.




