ಹಾಸನಾಂಬೆ ಜಾತ್ರೋತ್ಸವಕ್ಕೆ ಮೆರುಗು ತಂದ ಟಗರು ಮತ್ತು ಹೋತಗಳ ಪ್ರದರ್ಶನ

Share with

ಹಾಸನ: ನಗರದ ಪ್ರಸಿದ್ಧ ಹಾಸನಾಂಬೆ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಟಗರು ಮತ್ತು ಹೋತಗಳ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಚಾಲನೆ ನೀಡಿದರು. ಪ್ರದರ್ಶನದಲ್ಲಿ ವಿವಿಧ ತಳಿಗಳ ಟಗರು ಹಾಗೂ ಹೋತಗಳನ್ನು ಆಕರ್ಷಕವಾಗಿ ಪ್ರದರ್ಶಿಸಲಾಗಿದ್ದು, ಸಾರ್ವಜನಿಕರು ಹಾಗೂ ಜಾನುವಾರು ಪ್ರಿಯರ ಗಮನ ಸೆಳೆಯಿತು. ಪ್ರದರ್ಶನಕ್ಕೆ ಭೇಟಿ ನೀಡಿದ ಸಚಿವರು ವಿವಿಧ ತಳಿಗಳ ಟಗರು ಮತ್ತು ಹೋತಗಳನ್ನು ವೀಕ್ಷಿಸಿ ಅವುಗಳ ವಿಶೇಷತೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮೀಣ ಭಾಗದ ಕೃಷಿ ಹಾಗೂ ಪಶುಸಂಗೋಪನಾ ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಇಂತಹ ಪ್ರದರ್ಶನಗಳನ್ನು ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಹಾಸನಾಂಬೆ ಜಾತ್ರೆಯ ಧಾರ್ಮಿಕ ಸಂಭ್ರಮದ ಜೊತೆಗೆ ಇಂತಹ ವೈವಿಧ್ಯಮಯ ಕಾರ್ಯಕ್ರಮಗಳು ಜಾತ್ರೆಯ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿವೆ.


Share with

Leave a Reply

Your email address will not be published. Required fields are marked *