ಕೇಂದ್ರ ಸಚಿವ HD ಕುಮಾರಸ್ವಾಮಿಗೆ ಹಳ್ಳಿಗುಗ್ಗು ಎಂಬ ಪದ ಬಳಸಿರುವ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಯನ್ನೇ ಈಗ JDS ಅಸ್ತ್ರವಾಗಿಸಿಕೊಂಡಿದೆ. HDK ವಿಲೇಜ್ ಈಡಿಯಟ್ ರೀತಿ ಆಡ್ತಾರೆ ಎಂದಿದ್ದ ಪ್ರಿಯಾಂಕ್ ಹೇಳಿಕೆಗೆ ಕೌಂಟರ್ ಆಗಿ ಬೆಂಗಳೂರಿನ ಹಲವೆಡೆ ‘ಗೃಹ ಸಚಿವರೇ ನಾವು ಹಳ್ಳಿಯವರೇ ಏನಿವಾಗ ಎಂದು’ JDS ಪ್ಲೆಕ್ಸ್ ಜಾಹೀರಾತು ಹಾಕಿದೆ.
ರಾಮನಗರದ ಬಿಡದಿ ಪ್ಲೆಕ್ಸ್ ರಾರಾಜಿಸಿದ್ದು, ಪ್ರಿಯಾಂಕ್ ಹೇಳಿಕೆ ಖಂಡಿಸಿ, ರಾಜ್ಯಾದ್ಯಂತ ಹೋರಾಟಕ್ಕೂ JDS ಪ್ಲಾನ್ ನಡೆಸಿದೆ.




