ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ವಾಹನ

Share with

ಕಟಪಾಡಿ: ಚಾಲಕನ ನಿಯಂತ್ರಣ ತಪ್ಪಿದ ವಾಹನವೊಂದು ಉದ್ಯಾವರದಲ್ಲಿ  ಡಿವೈಡರ್ ಮೇಲೇರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಓರ್ವ ಗಂಭೀರ ಗಾಯಗೊಂಡಿದ್ದು ವಾಹನ ಜಖಂಗೊಂಡ ಘಟನೆ ಸೆ.19ರ ಗುರುವಾರ ಮುಂಜಾನೆ ನಡೆದಿದೆ.

ಬಾಗಲಕೋಟೆಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಈ ವಾಹನ ಬೆಳಗ್ಗೆ 4.30ರ ಸುಮಾರಿಗೆ ರಾಷ್ಟೀಯ ಹೆದ್ದಾರಿ 66ರ ಉದ್ಯಾವರ ಕಿಯಾ ಶೋ ರೂಂ ಮುಂಭಾಗದಲ್ಲಿ ಡಿಕ್ಕಿ ಹೊಡೆದಿದೆ. ಪರಿಸರದಲ್ಲಿ ವಿದ್ಯುತ್ ವ್ಯತ್ಯಯಗೊಂಡಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.


Share with

Leave a Reply

Your email address will not be published. Required fields are marked *