
ಉಪ್ಪಳ: ಮಂಗಲ್ಪಾಡಿ ಗ್ರಾಮ ಪಂಚಾಯತ್‌ನ ಉಪ್ಪಳ-ಕೋಡಿಬೈಲು ರಸ್ತೆ ಹದಗೆಟ್ಟು ಶೋಚನೀಯವಸ್ಥೆಯಿಂದ ಸಂಚಾರಕ್ಕೆ ಕಷ್ಟಕರವಾಗಿದ್ದು, ದುರಸ್ಥಿಗೊಳಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕೋಡಿಬೈಲು ಶಾಲೆ ಬಳಿಯಿಂದ ಮಣ್ಣಂಗುಳಿ ಮೈದಾನ ತನಕದ ರಸ್ತೆ ಅಲ್ಲಲ್ಲಿ ಡಾಮಾರೀಕರಣ, ಕಾಂಕ್ರೀಟ್ ಹಾಗೂ ಇಂಟರ್‌ಲಾಕ್ ಕಿತ್ತೋಗಿ ಶೋಚನೀಯ ಸ್ಥಿತಿಯಲ್ಲಿದ್ದು, ವಾಹನ ಸಂಚಾರ ದುಸ್ಥರವಾಗಿರುವುದಾಗಿ ದೂರಲಾಗಿದೆ. ಕೋಡಿಬೈಲು ಪ್ರದೇಶದಿಂದ ಉಪ್ಪಳ ಪೇಟೇ, ಪತ್ವಾಡಿ, ಮಣ್ಣಂಗುಳಿ, ಬಾಯಾರು- ಕೈಕಂಬ ಪ್ರದೇಶಗಳಿಗೆ ಸಂಪರ್ಕಿಸುವ ರಸ್ತೆ ಇದಾಗಿದೆ. ಅಲ್ಲದೆ ನೂರಾರು ಮನೆಗಳು ಹೊಂದಿಕೊAಡಿದ್ದು, ದಿನನಿತ್ಯ ಭಾರೀ ಪ್ರಮಣದಲ್ಲಿ ವಾಹನಗಳು ಸಂಚರಿಸುತ್ತಿದೆ. ರಸ್ತೆಯಲ್ಲಿ ಹೊಂಡಗಳು ಸೃಷ್ಟಿಯಾಗಿರುವುದರಿಂದ ವಾಹನಗಳು ಹೊಂಡಕ್ಕೆ ಬಿದ್ದು ಸಂಚರಿಸುವುದರಿAದ ಬಿಡಿಭಾಗಗಳು ಹಾನಿಗೀಡಾಗುವ ಸಂಭವ ಉಂಟಾಗಿದೆನ್ನಲಾಗಿದೆ. ಸಂಬoಧಪಟ್ಟ ಅಧಿಕಾರಿಗಳು ರಸ್ತೆ ದುರಸ್ಥಿಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.





