
ತೆಂಗಿನಕಾಯಿ ದರ ಗಣನೀಯವಾಗಿ ಏರಿಕೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ತೆಂಗಿನಕಾಯಿ ಸದ್ಯ ಗುಣಮಟ್ಟದ ಆಧಾರದಲ್ಲಿ 55 ರೂ. ನಿಂದ 65 ರೂ.ವರೆಗೂ ಮಾರಾಟವಾಗುತ್ತಿದೆ.

ಇದು ಮಾತ್ರವಲ್ಲದೆ, ಎಳನೀರು ದರ ಚಳಿಗಾಲದಲ್ಲೂ ಕೂಡ ಇಳಿಕೆ ಕಾಣದೇ ಪ್ರತಿ ಎಳನೀರು 45 ರಿಂದ 50 ರೂ.ವರೆಗೂ ಮಾರಾಟವಾಗುತ್ತಿದೆ. ಚಿಲ್ಲರೆ ವ್ಯಾಪಾರದಲ್ಲಿ ಪ್ರತಿ ಕಾಯಿಯೂ 30-40 ರೂ.ವರೆಗೂ ಮಾರಾಟವಾಗುತ್ತಿದೆ. ಹಬ್ಬಗಳ ಸಮಯದಲ್ಲಂತೂ ಈ ದರ ಮತ್ತಷ್ಟು ಏರಿಕೆಯಾಗಲಿದೆ.




