
ಮಹಾಕುಂಭ ನಗರ: 10,000 ಎಕರೆಗಳಷ್ಟು ವಿಸ್ತಾರವಾದ ತಾತ್ಕಾಲಿಕ ನಗರದಲ್ಲಿ ಒಂದು ಕೋಟಿಗೂ ಅಧಿಕ ಯಾತ್ರಿಕರು, ಸ್ವಾಮೀಜಿಗಳು ತಂಗಿದ್ದು, ಸುಮಾರು 20 ಲಕ್ಷ ಜನರು ಪ್ರತಿದಿನ ಭೇಟಿ ನೀಡುತ್ತಿದ್ದಾರೆ. ಇಲ್ಲಿನ ಇಂಟಿಗ್ರೇಟೆಡ್ ಕಂಟ್ರೋಲ್ ಕಮಾಂಡ್ ಸೆಂಟರ್ ((ICCI)) ನಿರಂತರ ನಿಗಾ ವಹಿಸುವ ಮೂಲಕ ಸುಗಮ ಜನದಟ್ಟಣೆ ನಿರ್ವಹಣೆ ಖಾತ್ರಿಗೆ ಹದ್ದಿನ ಕಣ್ಣಿಟ್ಟಿದೆ.

3,000 ಕ್ಕೂ ಹೆಚ್ಚು ಕ್ಯಾಮೆರಾಗಳು: ನಾಲ್ಕು ಇಂಟಿಗ್ರೇಟೆಡ್ ಕಂಟ್ರೋಲ್ ಕಮಾಂಡ್ ಸೆಂಟರ್ಗಳಲ್ಲಿ (ICCI) ತಲಾ 400 ಕ್ಕೂ ಹೆಚ್ಚು ಜನರು ನೇರಾ ದೃಶಾವಳಿ ಪ್ರದರ್ಶನದ (Displaying Live Footage) ದೊಡ್ಡ ಪರದೆಗಳು ಮತ್ತು ಹಾಟ್ ಸ್ಪಾಟ್ ಗಳಿಂದ ಮಾಹಿತಿಯನ್ನು ಸದಾ ವೀಕ್ಷಿಸುತ್ತಾ, ಜನದಟ್ಟಣೆ ಮತ್ತು ಬರುವ ಯಾತ್ರಿಗಳ ಕುರಿತು ಸಿಬ್ಬಂದಿಗೆ ಮಾಹಿತಿ ನೀಡುತ್ತಾರೆ. 3,000 ಕ್ಕೂ ಹೆಚ್ಚು ಕ್ಯಾಮೆರಾಗಳು, ನೀರೊಳಗಿನ ಡ್ರೋನ್ಗಳ ಮೂಲಕ ವಿಶೇಷ ನಿಗಾ ವಹಿಸಲಾಗಿದೆ.
ಏಳು ಕೋಟಿಗೂ ಹೆಚ್ಚು ಭಕ್ತರ ಸ್ನಾನ: ಪ್ರತಿ 12 ವರ್ಷಗಳಿಗೊಮ್ಮೆ ಆಯೋಜಿಸುವ ಬೃಹತ್ ಧಾರ್ಮಿಕ ಕಾರ್ಯಕ್ರಮ ಜನವರಿ 13 ರಿಂದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿದ್ದು, 45 ದಿನಗಳವರೆಗೆ ಮುಂದುವರಿಯುತ್ತದೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾದ ಸಂಗಮದಲ್ಲಿ ಇದುವರೆಗೆ ಏಳು ಕೋಟಿಗೂ ಹೆಚ್ಚು ಯಾತ್ರಿಕರು ಪವಿತ್ರ ಸ್ನಾನ ಮಾಡಿದ್ದಾರೆ.
AI ಆಧಾರಿತ ತಂತ್ರಜ್ಞಾನ: ಪಿಟಿಐ ಸುದ್ದಿಸಂಸ್ಥೆಯ ವರದಿಗಾರರೊಬ್ಬರು ಪ್ರಮುಖ ICCI ನಲ್ಲಿ ಒಂದು ದಿನ ಒಂದು ದಿನ ಕಳೆದಿದ್ದು, ಭದ್ರತೆ, ಜನದಟ್ಟಣೆ ನಿರ್ವಹಣೆ, ಅಪರಾಧ ತಡೆಗಟ್ಟುವಿಕೆಗೆ ನಿಗಾ ವಹಿಸುವುದು ಸೇರಿದಂತೆ ಅದರ ಆಂತರಿಕ ಕಾರ್ಯಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಜನದಟ್ಟಣೆ ನಿರ್ವಹಣೆ AI ಆಧಾರಿತ ತಂತ್ರಜ್ಞಾನ ಜನ ದಟ್ಟಣೆ ನಿರ್ವಹಣೆ ಮಾಡಲಾಗುತ್ತಿದೆ ಎಂದು ಐಸಿಸಿಸಿ ಉಸ್ತುವಾರಿ ಪೊಲೀಸ್ ಅಧೀಕ್ಷಕ ಅಮಿತ್ ಕುಮಾರ್ ತಿಳಿಸಿದರು.
ಪ್ರಯಾಗ್ ರಾಜ್ ನಗರದಾದ್ಯಂತ 3,000 ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಅಳವಡಿಸಿದ್ದೇವೆ. ಅದರಲ್ಲಿ 1,800 AI ಆಧಾರಿತ ಕ್ಯಾಮರಾಗಳಾಗಿವೆ. ಊಹೆ ಮೇಲೆ ಯಾವುದೇ ಕೆಲಸ ಮಾಡುತ್ತಿಲ್ಲ. ಎಲ್ಲಾವೂ ನೈಜ ಸಮಯದ ಮಾಹಿತಿಯನ್ನು ಸೆರೆಹಿಡಿಯುತ್ತಿವೆ. ಒಂದು ನಿರ್ದಿಷ್ಟ ಜಾಗದಲ್ಲಿ ಜನಸಂದಣಿಯು ಮಿತಿಗಿಂತ ಹೆಚ್ಚಾದಾಗ ಪರದೆ ಮೇಲೆ ಎಚ್ಚರಿಕೆಯ ಸಂದೇಶ ಬರುತ್ತದೆ. ಮಾಹಿತಿಯನ್ನು ವೈರ್ಲೆಸ್ ಗ್ರಿಡ್ಗಳಿಗೆ ತಿಳಿಸಲಾಗುತ್ತದೆ. ಈ ಹಂತದಲ್ಲಿ ಮೈದಾನದಲ್ಲಿರುವ ತಂಡಗಳು ಕಾರ್ಯಪ್ರವೃತ್ತವಾಗುತ್ತವೆ ಎಂದು ಅವರು ಹೇಳಿದರು.




