
ಉಪ್ಪಳ: ಧಾರ್ಮಿಕ ಕೇಂದ್ರಗಳು ಬೆಳೆದಾಗ ಸಮಾಜ ಸದೃಢವಾಗುವುದು. ತ್ಯಾಗ ಎಲ್ಲಿದೆಯೋ ಅಲ್ಲಿ ಭಕ್ತಿ ನೆಲೆಸುವುದು. ದೇಸದ ಹಿರಿಮೆಗೆ ಮತ್ತು ಸಿರಿವಂತಿಕೆಗೆ ಧಾರ್ಮಿಕ ಕ್ಷೇತ್ರಗಳು ಅಪಾರ ಕೊಡುಗೆ ನೀಡಿದೆ. ನಮ್ಮೂರಿನ ದೈವಸ್ಥಾನ, ದೇವಸ್ಥಾನ, ಮಂದಿರಗಳು ಬೆಳಗಿದರೆ ದೇಶ ಬೆಳಗಿದಂತೆ ಎಂದು ಎಡನೀರು ಶ್ರೀಮದ್ ಜಗದ್ಗುರು ಶ್ರೀಶಂಕರಾಚರ್ಯ ಸಂಸ್ಥಾನಂ ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಸತಡ್ಕ ಶ್ರೀ ಅರಸು ಸಂಕಲ ದೈವ ಕ್ಷೇತ್ರದಲ್ಲಿ ಬುಧವಾರ ನಡೆ ದ ಪುನರ್ ಪ್ರತಿಷ್ಟಾ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾಯಕ್ರಮದಲ್ಲಿ ಆಶೀರ್ವ ಚನ ನೀಡಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಯುವಕರು ಜಾಗೃತಿಯಾದರೆ ದೇಶ ಬೆಳಗಿದಂತೆ, ಮಾನವೀಯ ಮೌಲ್ಯಗಳು ಧಾರ್ಮಿಕ ಕೇಂದ್ರಗಳನ್ನು ಎತ್ತಿಹಿಡಿಯುತ್ತದೆ, ಎಲ್ಲಿ ಮಾತೃ ಶಕ್ತಿ ಜಾಗೃತರಾಗುತ್ತಾರೋ ದೇಶ ಸುದೃಢವಾಗಳು ಸಾಧ್ಯ ಎಂದು ಆಶೀರ್ವಚನ ನೀಡಿದರು.ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಧರ್ಮ ಶ್ರದ್ಧೆಗಳು ಇರುವಲ್ಲಿ ಅಪಾಯವಿಲ್ಲ, ಧಾರ್ಮಿಕ ಕೇಂದ್ರಗಳನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಶ್ರಮವಹಿಸಿದಾಗ ಉತ್ತಮ ಸಮಾಜ ಮೂಡಿ ಬರಲು ಸಾಧ್ಯ ಎಂದು ಆಶೀರ್ವ ಚನ ನೀಡಿದರು. ವೇದಿಕೆಯಲ್ಲಿ ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ನರಸಿಂಹ ತಂತ್ರಿಗಳು ಕುಡುಪು, ಬ್ರಹ್ಮಶ್ರೀ ವೇದಮೂರ್ತಿ ಅನಂತ ನಾರಾಯಣ ಭಟ್ ಪರಕ್ಕಜೆ, ಬ್ರಹ್ಮಶ್ರೀ ವೇದಮೂರ್ತಿ ರವೀಶ್ ತಂತ್ರಿಗಳು ಕುಂಟಾರು, ಗೌರವ ಉಪಸ್ಥಿತರಿದ್ದರು.
ಸಂತಡ್ಕ ಶ್ರೀ ಅರಸು ಸಂಕಲ ದೈವ ಕ್ಷೇತ್ರ ಆಡಳಿತ ಟ್ರಸ್ಟ್ ನ
ಅಧ್ಯಕ್ಷ ಡಾ. ಶ್ರೀಧರ ಭಟ್, ಅಧ್ಯಕ್ಷತೆ ವಹಿಸಿದರು.ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಚಾರ್ಯ ಶಂಕರ ನಾರಾಯಣ ಭಟ್ ಬಜಾಲ್, ಕೇರಳ ಮಲಬಾರ್ ದೇವಸ್ವಂ ಬೋರ್ಡ್ ನ ಸದಸ್ಯ ಶಂಕರ ರೈ ಮಾಸ್ಟರ್, ಕ್ಯಾಂಪ್ಕೋ ನಿರ್ದೇಶಕ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದಕ್ಷಿಣ ಕನ್ನಡದ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಭಾರತ್ ಕೋ – ಆಪರೇಟಿವ್ ಬ್ಯಾಂಕ್ ಮುಂಬೈ ಅಧ್ಯಕ್ಷ ಸೂರ್ಯ ಕಾಂತ್ ಜಯ ಸಿ ಸುವರ್ಣ, ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರದ ಜಯರಾಮ ಬಲ್ಲಂಗುಡೇಲು, ಚಿಪ್ಪಾರು ಅಮ್ಮೇರಿ ಗರಡಿಯ ಆಡಳಿತ ಮೊಕ್ತೆಸರ ಅಶೋಕ್ ಎಂ.ಸಿ, ಉದ್ಯಮಿ ಶ್ರೀಧರ ಶೆಟ್ಟಿ ಮುಟ್ಟಮ್, ಉಪ್ಪಳ ಶ್ರೀ ಅಯ್ಯಪ್ಪ ಭಜನಾ ಮಂದಿರ ಅಧ್ಯಕ್ಷ ಸತೀಶ ಶೆಟ್ಟಿ ಕುಡಾಲ್, ಕಡಂಬಾರ್ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೆಸರ ಎಸ್ ಎನ್ ಕಡಂಬಾರ್, ಶ್ರೀ ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಕುಂಜತ್ತೂರು, ಮಂಜೇಶ್ವರ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಕೃಷ್ಣ ಶಿವಕೃಪಾ ಕುಂಜತ್ತೂರು, ಶಶಿಧರ ಶೆಟ್ಟಿ ಜಮ್ಮದಮನೆ, ದಡ್ಡಂಗಡಿ ಶ್ರೀ ಮಹಾವಿಷ್ಣು ಸೇವಾ ಟ್ರಸ್ಟ್
ಅಧ್ಯಕ್ಷ ಬಾಲಕೃಷ್ಣ ಭಂಡಾರಿ ದಡ್ಡಂಗಡಿ, ಅಥಿತಿಗಳಾಗಿ ಆಗಮಿಸಿದರು. ಈ ವೇಳೆ
ಕ್ಷೇತ್ರ ತಂತ್ರಿ ಬ್ರಹ್ಮಶ್ರೀ ವೇದಮರ್ತಿ ನರಸಿಂಹ ತಂತ್ರಿಗಳು ಕುಡುಪು ಇವರಿಗೆ ಸನ್ಮಾನ, ದೈವ ಕ್ಷೇತ್ರದ ಕೋಶಾಧಿಕಾರಿ ನಾರಾಯಣ ರಾವ್ , ಪಾಕ ಪ್ರವೀಣರು ಕೃಷ್ಣ ಹೊಳ್ಳ, ಕೃಷಿಕರು ಮತ್ತ ಕೂಡು ಕುಟುಂಬವನ್ನು ನಡೆಸುತ್ತಿರುವ ತ್ಯಾಂಪಣ್ಣ ಶೆಟ್ಟಿ ಅಂಗಡಿದಾರು, ಕೃಷಿಕರಾದ ವಸಂತಿ ಅಪ್ಪಯ್ಯ ಪೂಂಜ ಮಾನೂರು , ಬಾಲಕೃಷ್ಣ ಭಂಡಾರಿ ದಡ್ಡಂಗಡಿ, ದೈವ ರ್ತಕ ರಾಜೇಶ್ ಮಾರು, ಇವರಿಗೆ ಗೌರವಾರ್ಪಣೆ ನಡೆಯಿತು





