ಬೇಸಿಗೆ ರಜೆಯಲ್ಲಿಯೂ ಕೂಡ 1-8ನೇ ತರಗತಿ ಮಕ್ಕಳಿಗೆ ಶಾಲೆಯಲ್ಲಿ ಬಿಸಿ ಊಟವನ್ನು ನೀಡಬೇಕೆಂದು ಸರ್ಕಾರ ಮಹತ್ವದ ಆದೇಶವನ್ನು ನೀಡಿದೆ.

2024-25ನೇ ಸಾಲಿನ ಏಪ್ರಿಲ್-ಮೇ 2024ರ 41 ದಿನಗಳ ಬೇಸಿಗೆ ರಜೆ ಅವಧಿಯಲ್ಲಿ ಬರಪೀಡಿತ ಎಂದು ಒಟ್ಟು 31 ಜಿಲ್ಲೆಗಳಲ್ಲಿನ 223 ತಾಲ್ಲೂಕುಗಳನ್ನು ಗುರುತಿಸಲಾಗಿದ್ದು ಈ ಸಂಬಂಧ 1-8ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಯೋಜನೆ ಅನುಷ್ಠಾನಗೊಳಿಸಿ ವಿತರಣೆ ಮಾಡಿರುವ ಸಂಬಂಧ ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.




