ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಕಿರಿಯ ಸಹೋದರ ವಿನೋದ್ ಸೆಹ್ವಾಗ್ ರನ್ನು ಚಂಡೀಗಢ ಪೊಲೀಸರು ಬಂಧನ ಮಾಡಿದ್ದಾರೆ.

ಅವರ ವಿರುದ್ಧ 7 ಕೋಟಿ ರೂ.ಗಳ ಚೆಕ್ ಬೌನ್ಸ್ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಆದರೆ ವಿನೋದ್ ಸೆಹ್ವಾಗ್ ಹಾಜರಾಗದ ಕಾರಣ ಅವರನ್ನು ತಲೆಮರೆಸಿಕೊಂಡಿರುವ ಆರೋಪಿ ಎಂದು ನ್ಯಾಯಾಲಯವು ಘೋಷಣೆ ಮಾಡಿತ್ತು.
ವಿನೋದ್ ಸೆಹ್ವಾಗ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.




