ಬ್ರಿಟಿಷ್ ಸಂಸತ್ತಿನಲ್ಲಿ ಕನ್ನಡ ಮತ್ತು ತುಳು ಕವನ ವಾಚನ

Share with


25ನೇ ಅಂತರಾಷ್ಟ್ರೀಯ ಮಾತೃಭಾಷಾ ದಿನಾಚರಣೆಯನ್ನು ಲಂಡನ್‌ನ ಬ್ರಿಟಿಷ್ ಸಂಸತ್ತಿನ ಹೌಸ್ ಆಫ್ ಲಾರ್ಡ್ಸ್‌ನಲ್ಲಿ  ವಿಜೃಂಭಣೆಯಿಂದ ಆಚರಿಸಲಾಗಿದೆ. ಈ  ಸಂದರ್ಭದಲ್ಲಿ ರಾಧಿಕಾ ಜೋಷಿ ಕನ್ನಡ ಕವನ ಮತ್ತು ಡಾ. ಸರಿತಾ ತುಳು ಕವನ ವಾಚಿಸಿದ್ದಾರೆ.



ಇದರಲ್ಲಿ ಬ್ಯಾರೋನೇಸ್ ಗಾರ್ಡನ್ ಆತಿಥ್ಯದಲ್ಲಿ, ಸಂಸ್ಕೃತಿ ಸೆಂಟರ್ ಫಾರ್ ಕಲ್ಚರಲ್ ಎಕ್ಸಲೆನ್ಸ್ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ಭಾರತ ಮತ್ತು ದಕ್ಷಿಣ ಏಷ್ಯಾದ 25 ಭಾಷೆಗಳ ವಿಶೇಷತೆಗಳನ್ನು ಕವನ ಮತ್ತು ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ಅನಾವರಣಗೊಳಿಸಲಾಯಿತು . ಇದರಲ್ಲಿ ರಾಧಿಕಾ ಜೋಷಿ ಕನ್ನಡ ಕವನ ಮತ್ತು ಡಾ. ಸರಿತಾ ತುಳು ಕವನ ವಾಚಿಸಿದ್ದು ವಿಶೇಷವಾಗಿತ್ತು.
ಈ ಎಲ್ಲಾ ಕವನಗಳ ಸಂಗ್ರಹವನ್ನು ಒಳಗೊಂಡ ರೈಮ್ ಆಯಂಡ್ ರೆಸೊನಾನ್ಸ್ ಎಂಬ ಪುಸ್ತಕವನ್ನು ಇದೇವೇಳೆ ಬಿಡುಗಡೆ ಮಾಡಲಾಯಿತು.


Share with

Leave a Reply

Your email address will not be published. Required fields are marked *