ಯೂಟ್ಯೂಬ್‌ ನೋಡಿ ಡಯಟ್ ಮಾಡಿ ಯುವತಿ ಮೃತ್ಯು

Share with

ಕೇರಳ : ಯೂಟ್ಯೂಬ್‌ ವೀಡಿಯೋ ನೋಡಿ ತೂಕ ಇಳಿಸಿಕೊಳ್ಳಲು ಡಯಟ್‌ ಮಾಡುತ್ತಿದ್ದ ಯುವತಿಯೋರ್ವಳು  ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ನಡೆದಿದೆ.


ಕಣ್ಣೂರಿನ ಕೂತುಪರಂಬದ ಮೇರುವಾಂಬೈ ಆರೋಗ್ಯ ಕೇಂದ್ರದ ಬಳಿಯ ಕೈತೇರಿಕಂಡಿ ನಿವಾಸಿ 18 ವರ್ಷದ ಎಂ. ಶ್ರೀನಂದ ಮೃತ ಯುವತಿ ಎಂದು ತಿಳಿದು ಬಂದಿದೆ.
ತಲಶ್ಶೇರಿ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಶನಿವಾರ ಕೊನೆಯುಸಿರೆಳೆದಿದ್ದಾಳೆ. ಮಟ್ಟನೂರಿನ ಪಳಸ್ಸಿ ರಾಜ ಎನ್‌ಎಸ್‌ಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿಪೂರ್ವ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.


ಶ್ರೀನಂದ ಅಧಿಕ ತೂಕ ಹೊಂದಿದ್ದಾಳೆಂದು ಭಾವಿಸಿ ಯೂಟ್ಯೂಬ್‌ ನೋಡಿ ಆಹಾರ ಕ್ರಮವನ್ನು ಅನುಸರಿಸುತ್ತಿದ್ದಳು. ದೇಹಕ್ಕೆ ಬೇಕಾಗಿರುವ ಆಹಾರಕ್ಕಿಂತ ಕಡಿಮೆ ಆಹಾರ ಸೇವಿಸಿ ನಂತರ ಆಕೆಯ ಹೊಟ್ಟೆ ಮತ್ತು ಅನ್ನನಾಳ ಕುಗ್ಗಿ ಅನಾರೋಗ್ಯಕ್ಕೆ ಒಳಗಾಗಿ ಪ್ರಾಣ ಬಿಟ್ಟಿದ್ದಾಳೆ ಎಂದು ತಿಳಿದು ಬಂದಿದೆ.


Share with

Leave a Reply

Your email address will not be published. Required fields are marked *