
ಕುಂದಾಪುರ : ಬೈಕೊಂದು ನಿಯಂತ್ರಣ ತಪ್ಪಿ ಕಂಪೌಂಡ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟ ಘಟನೆ ಕುಂದಾಪುರ ಸಮೀಪದ ಗಂಗೊಳ್ಳಿ ಪೊಲೇಸ್ ಠಾಣಾ ವ್ಯಾಪ್ತಿಯ ಮೊವಾಡಿ ಬಳಿಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಮೊವಾಡಿ ನಿವಾಸಿ ಕೃಷ್ಣ ಮೊಗವೀರ ಇವರ ಪುತ್ರನಾದ ನಿತಿನ್ ಮೊಗವೀರ (26 ವರ್ಷ) ಎಂದು ಗುರುತಿಸಲಾಗಿದೆ. ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





