
ಮಂಗಳೂರು: ಕೆಪಿಟಿ ಬಳಿಯಲ್ಲಿರುವ ಆರ್‌ಟಿಒ ತಪಾಸಣೆ ಕೇಂದ್ರದ ಬಳಿಯಲ್ಲಿ ನಿಷೇಧಿತ ಮಾದಕ ಮಾರಾಟ ಮಾಡುತ್ತಿದ್ದ ಅಜರುದ್ದೀನ್ (35) ಎಂಬಾತನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಗಸ್ತು ತಿರುಗುತ್ತಿದ್ದಾಗ ಮಾದಕ ಮಾರಾಟ ಮಾಡುತ್ತಿರುವ ಬಗ್ಗೆ ಸಿಕ್ಕಿದ ಮಾಹಿತಿಯಿಂದ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ 9 ಗ್ರಾಂ ಎಂಡಿಎಂಎ, 210 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




