
ಸೋನು ನಿಗಮ್ ವೇದಿಕೆಯಲ್ಲಿ ಹಾಡು ಹಾಡುವಾಗ ಕೆಲವರು ಕಲ್ಲುತೂರಾಟ ನಡೆಸಿದ್ದು, ಗಾಯಕ ಸೋನು ನಿಗಮ್ ಅವರು ಕೈಮುಗಿದು ಬೇಡಿಕೊಂಡಂತಹ ಘಟನೆ ನಡೆದಿದೆ.

ದೆಹಲಿಯ ತಾಂತ್ರಿಕ ವಿಶ್ವವಿದ್ಯಾಲಯದ ಎಂಜಿಫೆಸ್ಟ್ 2025ಕ್ಕೆ ಸೋನು ನಿಗಮ್ ಅವರನ್ನು ಹಾಡು ಹಾಡಲು ಆಹ್ವಾನಿಸಿದ್ದರು. ಕಾಲೇಜಿನ ಕಾರ್ಯಕ್ರಮವಾದ ಕಾರಣ ಅನೇಕ ವಿದ್ಯಾರ್ಥಿಗಳು ಬಂದು ಸೇರಿದ್ದರು. ಸೋನು ನಿಗಮ್ ಅವರು ವೇದಿಕೆಯಲ್ಲಿ ಹಾಡುತ್ತಿರುವಾಗ ವಿದ್ಯಾರ್ಥಿಗಳ ಒಂದು ಬಣ ವೇದಿಕೆಯತ್ತ ನಿರಂತರವಾಗಿ ಕಲ್ಲು ಮತ್ತು ಬಾಟಲಿಗಳನ್ನು ಎಸೆದಿದೆ. ವಾತಾವರಣಕ್ಕೆ ಭಂಗ ತರುವಂತ ಕೆಲಸ ಮಾಡಿದೆ.ಆದರೆ ನಾನು ನಿಮಗೋಸ್ಕರ ಹಾಡು ಹಾಡಲು ಇಲ್ಲಿಯವರೆಗೆ ಬಂದಿದ್ದೇನೆ, ನಿಮಗೆ ನನ್ನ ಹಾಡುಗಳು ಇಷ್ಟವಾಗಿಲ್ಲ ಅಂದರೂ ಪರವಾಗಿಲ್ಲ ದಯವಿಟ್ಟು ಹೀಗೆಲ್ಲ ಮಾಡಬೇಡಿ ಎಂದು ಮನವಿಯನ್ನು ಮಾಡಿಕೊಂಡರು. ಸದ್ಯ ಕಾಲೇಜಿನಲ್ಲಿ ಸೋನು ನಿಗಮ್ ಹಾಡುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
https://www.instagram.com/reel/DHlozUJT5eD/?igsh=eHMyN28xYWpncGd0




