
ಕಾಸರಗೋಡು: ಶಾಲಾ ವಿದ್ಯಾರ್ಥಿನಿಯ ಮುಂದೆ ನಗ್ನ ಪ್ರದರ್ಶನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬೋವಿಕ್ಕಾನ ಮುಲ್ಲಚ್ಚೇರಿಯಡ್ಕದ ಮೊಹಮ್ಮದ್ ಇಟ್ಬಾಲ್(38)ಗೆ ಕಾಸರಗೋಡು ಫಾಸ್ಟ್ಟ್ರ್ಯಾಕ್ ಸ್ಪೆಷಲ್ ಫೋಕ್ಲೋ ನ್ಯಾಯಾಲಯ ಎರಡು ವರ್ಷಗಳ ಕಠಿನ ಸಜೆ ಹಾಗೂ 40 ಸಾವಿರ ರೂ. ದಂಡ ವಿಧಿಸಿದೆ. ದಂಡ ಪಾವತಿಸದಿದ್ದಲ್ಲಿ 8 ತಿಂಗಳು ಹೆಚ್ಚುವರಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.





