
ಕಾರ್ಕಳ : 10 ನೇ ತರಗತಿಯಲ್ಲಿ ಕೆಲವು ವಿಷಯಗಳಲ್ಲಿ ಅನುತ್ತೀರ್ಣಗೊಂಡಿದ್ದ ಕಾರಣಕ್ಕೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ. 27ರಂದು ನಡೆದಿದೆ.

ಎಳ್ಳಾರೆ ಗ್ರಾಮ ಮಂಜರಬೆಟ್ಟು ನಿವಾಸಿ ರಮೇಶ ಇವರ ಮಗ ತೇಜಸ್ (17) ತೇಜಸ್ ಎಂದು ಗುರುತಿಸಲಾಗಿದೆ.
ಅಜೆಕಾರಿನಲ್ಲಿ ಟ್ಯೂಷನ್ ಪಡೆದು ಎಸ್.ಎಸ್ಎಲ್.ಸಿ ಸಪ್ಲಿಮೆಂಟರಿ ಪರೀಕ್ಷೆ ಬರೆದಿದ್ದು, ಅದರಲ್ಲಿ ಕೂಡ ಅನುತ್ತೀರ್ಣಗೊಂಡ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ತೆರೆದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.




