ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ಇಳಿಕೆ

Share with

ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು 41 ರೂ.ಗಳಷ್ಟು ಕಡಿತಗೊಳಿಸುವುದಾಗಿ ಘೋಷಿಸಿವೆ.

ಏಪ್ರಿಲ್ 1, 2025 ರಂದು ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಿವೆ. ಇದರಿಂದ ಬೃಹತ್ ಅಡುಗೆ ಇಂಧನವನ್ನು ಬಳಸುವ ಉದ್ಯಮಗಳಾದ ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ಹಲವರಿಗೆ ನೇರವಾಗಿ ಅನುಕೂಲವಾಗಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ, 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು 41 ರೂಪಾಯಿಗಳಷ್ಟು ಇಳಿಕೆ ಮಾಡಲಾಗಿದೆ. ದೆಹಲಿಯಲ್ಲಿ ಪರಿಷ್ಕೃತ ಬೆಲೆ ಈಗ ಪ್ರತಿ ಸಿಲಿಂಡರ್‌ಗೆ 1,762 ರೂಪಾಯಿ ಆಗಿದೆ.


Share with

Leave a Reply

Your email address will not be published. Required fields are marked *