Health Tips: ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದರೆ ಏನಾಗುತ್ತೆ ಗೊತ್ತಾ?

ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನಾವು ಏನು ಸೇವಿಸುತ್ತೇವೆ ಅದು ನಮ್ಮ ಇಡೀ ದಿನದ ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳುತ್ತಾರೆ. ಹೀಗಾಗಿ ನಮ್ಮ ದಿನದ ಮೊದಲ ಆಹಾರ ಆರೋಗ್ಯಕರವಾಗಿ ರಬೇಕು. ಬೆಳಗ್ಗೆ ಎದ್ದು ಬೆಡ್ ಕಾಫಿ ಕುಡಿಯುವುದು ಅಥವಾ ಚಹಾ ಕುಡಿಯುವುದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ.ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದರೆ ಆಗುವ ಆರೋಗ್ಯ ಸಮಸ್ಯೆಗಳು ಏನೇನು ಎಂಬುದನ್ನು ತಿಳಿದುಕೊಳ್ಳೋಣ

ಬೆಳ್ಳಂಬೆಳಗ್ಗೆ ನಿಮಗೆ ಚಹಾ ಕುಡಿಯುವ ಅಭ್ಯಾಸ ಇದ್ದರೆ ಮತ್ತು ಅದನ್ನು ನೀವು ಪ್ರತಿದಿನ ಮುಂದುವರಿಸುತ್ತಾ ಬಂದಿದ್ದರೆ, ನಿಮಗೆ ಇನ್ನು ಮೇಲೆ ತಲೆ ನೋವು ಶುರುವಾ ಗಬಹುದು.

ಚಹಾದಲ್ಲಿ ಕೇವಲ ಕೆಫೆನ್ ಮಾತ್ರವಲ್ಲದೆ, Theophylline ಎಂಬ ಅಂಶ ಕೂಡ ಇರುತ್ತದೆ. ಇದು ನೀವು ಸೇವಿಸಿದ ಆಹಾರವನ್ನು ಕರುಳಿನ ಭಾಗದಲ್ಲಿ ಮಲವಾಗಿ ಬದಲಾಗಲು ಬಿಡುವುದಿಲ್ಲ. ಹೀಗಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವ ಬಹ ಳಷ್ಟು ಜನರಿಗೆ ಮಲಬದ್ಧತೆ ಸಮಸ್ಯೆ ಕಂಡುಬರುವುದು ಸಾಮಾನ್ಯವಾಗಿರುತ್ತದೆ.

ಚಹಾ ತನ್ನಲ್ಲಿ ಟ್ಯಾನಿನ್ ಎಂಬ ಅಂಶವನ್ನು ಒಳಗೊಂಡಿ ರುವುದರಿಂದ ತಿನ್ನುವ ಆಹಾರದಲ್ಲಿ ಸಿಗುವಂತಹ ಕಬ್ಬಿಣದ ಅಂಶವನ್ನು ನಮ್ಮ ದೇಹ ಹೀರಿಕೊಳ್ಳಲು ಬಿಡುವುದಿಲ್ಲ.ಇದರ ಜೊತೆಗೆ ನಮ್ಮ ಆಹಾರದಲ್ಲಿ ಕಂಡುಬರುವ ಬೇರೆ ಬೇರೆ ಬಗ್ಗೆ ಪೌಷ್ಟಿಕಾಂಶಗಳನ್ನು ಸಹ ನಮ್ಮ ದೇಹಕ್ಕೂ ಪೂರ್ಣ ಪ್ರಮಾಣದಲ್ಲಿ ಸಿಗದಂತೆ ಮಾಡುತ್ತದೆ.

ಟೀ ಕುಡಿದರೆ ಖಂಡಿತ ಗ್ಯಾಸ್ಟ್ರಿಕ್ ಆಗುತ್ತದೆ ಅದು ನೀವು ಯಾವುದೇ ಸಮಯದಲ್ಲಿ ಕುಡಿದರೂ ಅಷ್ಟೇ.ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಸ್ವಲ್ಪ ಜಾಸ್ತಿ ಪ್ರಮಾಣದಲ್ಲಿ ಆಗಬಹುದು. ಈ ರೀತಿ ಉಂಟಾದ ಗ್ಯಾಸ್ಟ್ರಿಕ್ ನಿಂದ ನೀವು ಯಾವುದೇ ಆಹಾರ ಸೇವಿಸಿದರೂ ಅಷ್ಟು ಬೇಗನೆ ಅದು ಜೀರ್ಣವಾಗುವುದಿಲ್ಲ.

Leave a Reply

Your email address will not be published. Required fields are marked *