
ಸಕಲೇಶಪುರ:- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಹಾಸನ ಮತ್ತು ಅಮ್ಮ ಚಾರಿಟಬಲ್ ಟ್ರಸ್ಟ್ ಹಾಗೂ ಡಾ|| ಕೆ. ವಾಸುದೇವ್ ಶೆಣೈ, ವೈಧ್ಯಾದಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ರೈತರು ಮತ್ತು ಸುತ್ತಮುತ್ತಲ ಗ್ರಾಮಸ್ಥರು ಇವರ ಸಂಯುಕ್ತಾಶ್ರಯದಲ್ಲಿ ಅಮ್ಮ ಕಣ್ಣಿನ ಆಸ್ಪತ್ರೆ ಮತ್ತು ರೆಟಿನಾಕೇರ್ ಸೆಂಟರ್ ವತಿಯಿಂದ ಇಂದು ದಿನಾಂಕ :- 24-05-2025ನೇ ಶುಕ್ರವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1.30ರ ವರೆಗೆ ಶುಕ್ರವಾರಸಂತೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಕಣ್ಣಿನ ಪರೀಕ್ಷಾ ಶಿಬಿರವನ್ನು ಏರ್ಪಡಿಸಲಾಗಿದೆ.
ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕಾಗಿ ವಿನಂತಿ. ಯಶಸ್ವಿನಿ ಕಾರ್ಡ್ ಮತ್ತು ಧರ್ಮಸ್ಥಳ ಸಂಘದ ಕಾರ್ಡ್ ಹಾಗೂ ಎಲ್ಲಾ ತರಹದ ಇನ್ಸೂರೆನ್ಸ್ ಇರುವವರಿಗೆ ಉಚಿತ ಸೌಲಭ್ಯವಿರುತ್ತದೆ.ಶಿಬಿರಕ್ಕೆ ಬರುವವರು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮೊಬೈಲ್ ಸಂಖ್ಯೆ ತಪ್ಪದೇ ತರಬೇಕು.
ಪೊರೆ ಇದೆ ಎಂದು ಗುರುತಿಸಿದವರನ್ನು ಅದೇ ದಿನ ಹಾಸನದ ಅಮ್ಮ ಕಣ್ಣಿನ ಆಸ್ಪತ್ರೆಯ ವಾಹನದಲ್ಲಿ ಕರೆದುಕೊಂಡು ಬಂದು ಅದೇ ದಿನ ಕಣ್ಣಿನ ಆಪರೇಷನ್ ಮಾಡಲಾಗುವುದು.ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ಮೊ. : 8147019448.





