ಪರೀಕ್ಷೆಯಲ್ಲಿ ಅಂಕ ಕಡಿಮೆಯೆಂದು ಮನೆ ಬಿಟ್ಟ ಬಾಲಕಿ; ಕಾಸರಗೋಡು ತಲುಪಿದ ರೈಲಿನಲ್ಲಿ ಪತ್ತೆ..!

Share with

ಕಾಸರಗೋಡು: ಪರೀಕ್ಷೆಯಲ್ಲಿ ನಿರೀಕ್ಷೆಯಂತೆ ಅಂಕ ಲಭಿಸದ ಕಾರಣದಿಂದ ವಿದ್ಯಾರ್ಥಿನಿಯೋರ್ವಳು ತನ್ನ ಸಂಬಂಧಿಕಳಾದ ಬಾಲಕಿ ಜತೆ ಮನೆ ಬಿಟ್ಟ ಬಳಿಕ ಅವರಿಬ್ಬರನ್ನು ರೈಲು ಗಾಡಿಯಿಂದ ಪತ್ತೆ ಹಚ್ಚಲಾಗಿದೆ.

ಕಣ್ಣೂರು ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ 18ರ ಹರೆಯದ ವಿದ್ಯಾರ್ಥಿನಿಗೆ ಪ್ಲಸ್ ಟು ಪರೀಕ್ಷೆಯಲ್ಲಿ ನಿರೀಕ್ಷಿಸಿದಷ್ಟು ಅಂಕ ಲಭಿಸಿರಲಿಲ್ಲ. ಇದರಿಂದ ಬೇಸರಗೊಂಡು ಆಕೆ ಸಂಬಂಧಿಕಳಾದ 14ರ ಹರೆಯದ ಬಾಲಕಿಯೊಂದಿಗೆ ಮೇ 26ರಂದು ಬೆಳಗ್ಗೆ ಮನೆ ಬಿಟ್ಟಿದ್ದರು. ಈ ಬಗ್ಗೆ ನೀಡಲಾದ ದೂರಿನಂತೆ ಕಣ್ಣೂರು ಸಿಟಿ ಪೊಲೀಸರು ನಾಪತ್ತೆ ಪ್ರಕರಣ ದಾಖಸಿ, ಈ ಬಗ್ಗೆ ಮಾಹಿತಿಯನ್ನು ರೈಲ್ವೇ ಪೊಲೀಸ್ ಸಹಿತ ಎಲ್ಲ ಪೊಲೀಸ್‌ ಠಾಣೆಗಳಿಗೆ ನೀಡಿದ್ದರು.

ಇದರಂತೆ ಕಾಸರಗೋಡು ರೈಲು ನಿಲ್ದಾಣದಲ್ಲಿ ಪೊಲೀಸರು ಎಲ್ಲ ರೈಲು ಗಾಡಿಗಳನ್ನು ಶೋಧಿಸುತ್ತಿದ್ದರು. ಹೀಗಿರುವಂತೆ ಮೇ 27 ರಂದು ಮುಂಜಾನೆ 1 ಗಂಟೆಗೆ ಕಾಸರಗೋಡಿಗೆ ತಲುಪಿದ ವೆಸ್ಟ್ಕೋಸ್ಟ್ ರೈಲು ಗಾಡಿಯಲ್ಲಿ ಶೋಧಿಸಿದಾಗ ನಾಪತ್ತೆಯಾದ ಹೆಣ್ಮಕ್ಕಳಿಬ್ಬರು ಪತ್ತೆಯಾಗಿದ್ದಾರೆ.

ಅವರನ್ನು ವಶಕ್ಕೆ ತೆಗೆದುಕೊಂಡಿದ್ದು, ಅನಂತರ ಅವರನ್ನು ಕಣ್ಣೂರು ಸಿಟಿ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು


Share with

Leave a Reply

Your email address will not be published. Required fields are marked *