ಬೆಂಗಳೂರು ಟ್ರಾಫಿಕ್ ಸಮಸ್ಯೆಯಿಂದ ಕಂಗೆಟ್ಟಿದ್ದವರಿಗೆ ಕೇಂದ್ರ ಸರ್ಕಾರ ಹೊಸ ಯೋಜನೆಯನ್ನು ಜಾರಿಗೊಳಿಸಲಿದೆ. ಅದುವೇ ಏರ್ ಪಾಡ್ ಟ್ಯಾರ್ಕ್ಸಿ ಅಥವಾ ಏರ್ ಪಾಡ್ ಸಿಸ್ಟಂ.

ಇದು ಚಿಕ್ಕ ಎಲೆಕ್ಟ್ರಿಕ್ ವಾಹನವಾಗಿದ್ದು ಇದಕ್ಕೆ ಡ್ರೈವರ್ ಇರುವುದಿಲ್ಲ. ವಿದ್ಯುತ್ ಕೇಬಲ್‌ಗಳ ಮೂಲಕ ಈ ವಾಹನ ಚಲಿಸುತ್ತದೆ. ಆರಂಭದಲ್ಲಿ ದೆಹಲಿಗೆ ಪಾಡ್ ಸಿಸ್ಟಮ್ ಬರಲಿದೆ. ಟ್ರಾಫಿಕ್ ಸಮಸ್ಯೆ ಬೆಂಗಳೂರಿನಲ್ಲಿ ಜಾಸ್ತಿ ಇರುವುದರಿಂದ ಈ ಯೋಜನೆ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.




