ಮಾಜಿ ಸಿಎಂ ನಿಧನದ ಹಿನ್ನೆಲೆ ಕೇರಳದಲ್ಲಿ ಮೂರು ದಿನಗಳ ಶೋಕಾಚರಣೆ

Share with

ಕಾಸರಗೋಡು: ಕೇರಳ ಮಾಜಿ ಸಿಎಂ ವಿ. ಎಸ್. ಅಚ್ಯುತಾನಂದನ್ ನಿಧನದ ಹಿನ್ನೆಲೆಯಲ್ಲಿ ಗೌರವಸೂಚಕವಾಗಿ ಕೇರಳ ರಾಜ್ಯದಲ್ಲಿ ಮಂಗಳವಾರ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಅಲ್ಲದೇ ಮೂರು ದಿನಗಳ ಶೋಕಾಚರಣೆ ನಡೆಯಲಿದೆ.

ಇಂದು(ಜು.22) ಕೇರಳದ ಎಲ್ಲಾ ಶೈಕ್ಷಣಿಕ, ಸ್ಥಳೀಯಾಡಳಿತ, ಸರಕಾರಿ, ಅರೆ ಸರಕಾರಿ ಸಂಸ್ಥೆಗಳಿಗೆ ಸರಕಾರಿ ಇಲಾಖೆ ರಜೆ ಘೋಷಿಸಿದೆ. ಹಾಗೂ ಮಂಗಳವಾರ ನಡೆಯಬೇಕಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಖಾಸಗಿ ಬಸ್ ಮಾಲಕರ ಸಂಘ ಇಂದಿನಿಂದ ಆರಂಭಿಸುವುದಾಗಿ ಘೋಷಣೆ ಮಾಡಿದ್ದ ಬಸ್ ಮುಷ್ಕರವನ್ನು ಮುಂದೂಡಲಾಗಿದೆ.

ಮಂಗಳವಾರ ತಿರುವನಂತಪುರದಲ್ಲಿ ಪಾರ್ಥಿವ ಶರೀರದ ಸಾರ್ವಜನಿಕ ಪ್ರದರ್ಶನ ಮತ್ತು ಅಂತಿಮ ನಮನ ನಡೆಯಲಿದೆ. ಬಳಿಕ ಶೋಕಯಾತ್ರೆಯ ಮೂಲಕ ಆಲಪ್ಪುಯ ಪುನ್ನಪ್ರ ಅವರ ಊರಿಗೆ ಪಾರ್ಥಿವ ಶರೀರ ತಲುಪಲಿದೆ. ಬುಧವಾರ ಅಂತ್ಯಕ್ರಿಯೆ ಜರುಗಲಿದೆ.


Share with

Leave a Reply

Your email address will not be published. Required fields are marked *