ರಾಜ್ಯದಲ್ಲಿ ಮತ್ತೆ ಮಳೆ; ಕಾಸರಗೋಡು ಸೇರಿದಂತೆ ಐದು ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್

Share with

ಕಾಸರಗೋಡು: ರಾಜ್ಯದಲ್ಲಿ ಮತ್ತೆ ಮಳೆ ತೀವ್ರ ಗೊಳ್ಳಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಮುಂದಿನ ಐದು ದಿನ ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆ ಹಾಗೂ ಸೆ.26, 27 ರಂದು ಕೆಲವು ಕಡೆ ತೀವ್ರ ಮಳೆ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ತೀವ್ರ ಮಳೆಯನ್ನು ಗಣನೆಗೆ ತೆಗೆದು ಕೇಂದ್ರ ಹವಾಮಾನ ಇಲಾಖೆ ವಿವಿಧ ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಿದೆ.

ಇಂದು(ಸೆ.25)ಆಲಪ್ಪುಳ, ಕೋಟಯಂ, ಇಡುಕ್ಕಿ ಎರ್ನಾಕುಳಂ, ತೃಶೂರ್‌ ಕಾಸರಗೋಡು ಜಿಲ್ಲೆಗಳಲ್ಲಿ ಅಲ್ಪ ಮಳೆಯಾಗಿದ್ದು ಹಾಗೂ ಸೆ.26ರಂದು ಪತ್ತನಂತಿಟ್ಟ ಆಲಪ್ಪುಳ, ಕೋಟಯಂ, ಇಡುಕ್ಕಿ, ಎರ್ನಾಕುಳಂ, ತೃಶೂರು ಜಿಲ್ಲೆಗಳಲ್ಲೂ, ಶನಿವಾರ ಮಲಪ್ಪುರಂ, ಕಲ್ಲಿಕೋಟೆ, ವಯನಾಡ್, ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಪಶ್ಚಿಮಬಂಗಾಳ, ಉತ್ತರ ಒಡಿಶ್ಯಾ ಉತ್ತರ ಪಶ್ಚಿಮ ಬಂಗಾಳ ಆಳಸಮುದ್ರದ ಮೇಲೆ ರೂಪುಗೊಂಡ ವಾಯುಭಾರ ಮಳೆಗೆ ಸಾಧ್ಯತೆ ಸೃಷ್ಟಿಸಿದೆ ಎನ್ನಲಾಗಿದೆ. ಮುಂದಿನ 24 ಗಂಟೆಗಳೊಳಗೆ ಇದು ದುರ್ಬಲಗೊಳ್ಳಲು ಸಾಧ್ಯತೆಯೂ ಇದೆ ಎನ್ನಲಾಗಿದೆ.


Share with

Leave a Reply

Your email address will not be published. Required fields are marked *