ಅಕ್ಷಯ ಕಾಲೇಜು ಪುತ್ತೂರು ಇಲ್ಲಿನ ಆ್ಯಂಟಿ ವಿಮೆನ್ ಹರಾಸ್ಮೆಂಟ್ ಸೆಲ್ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ದಿನಾಂಕ 16/10/2025 ರಂದು ‘ಹರ್ ವೋಯ್ಸ್ ಹರ್ ಪವರ್’ ಎಂಬ ಕಾರ್ಯಕ್ರಮವನ್ನು ನಡೆಸಲಾಯಿತು.ಸಂಘದ ಸಂಯೋಜಕಿಯಾದ ಶ್ರೀಮತಿ ಕಾವ್ಯ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

AWHC ಇದರ ಸದಸ್ಯೆಯಾದ ಅನನ್ಯ ಭಟ್ ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀಮತಿ ಮೀನಾಕುಮಾರಿ.ಕೆ ಇವರ ಪರಿಚಯವನ್ನು ತಿಳಿಸಿಕೊಟ್ಟರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಮನೋವೈದ್ಯೆ ಹಾಗೂ ವಕೀಲರಾದ ಶ್ರೀಮತಿ ಮೀನಾಕುಮಾರಿ.ಕೆ ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ವಿಮೆನ್ ಹರಾಸ್ಮೆಂಟ್ ಮತ್ತು ಅದನ್ನು ತಡೆಗಟ್ಟಲು ಜಾರಿಗೊಳಿಸಿರುವ ವಿವಿಧ ಕಾನೂನುಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು ಹಾಗೂ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಅಕ್ಷಯ ಪದವಿ ಪೂರ್ವ ಕಾಲೇಜು ಇದರ ಪ್ರಾಂಶುಪಾಲರಾದ ಶ್ರೀಮತಿ ಗಂಗಾರತ್ನ ಇವರು ಅಧ್ಯಕ್ಷೀಯ ನುಡಿಗಳನ್ನಾಡಿದರು.
AWHC ಇದರ ಅಧ್ಯಕ್ಷೆಯಾದ ಕುಮಾರಿ ಶ್ರಾವ್ಯ ಇವರು ಸ್ವಾಗತಿಸಿ,AWHC ಇದರ ಕಾರ್ಯದರ್ಶಿಯಾದ ಕುಮಾರಿ ಅಪೇಕ್ಷಾ.ಕೆ.ಜೆ.ಶೆಟ್ಟಿ ಧನ್ಯವಾದ ಸಮರ್ಪಣೆ ಮಾಡಿದರು.
ಕುಮಾರಿ ದೇವಿಕಾ ಮತ್ತು ಸ್ವರ್ಣ ಶ್ರೀ ಇವರು ಪ್ರಾರ್ಥನೆ ಮಾಡಿದರು.
ಐಕ್ಯೂಎಸಿ ಇದರ ಸಂಯೋಜಕಿಯಾದ ಶ್ರೀಮತಿ ರಶ್ಮಿ , AWHC ಇದರ ಸದಸ್ಯೆಯಾದ ಶ್ರೀಮತಿ ಅನುಷಾ ಹಾಗೂ AWHC ಇದರ ಉಪ ಕಾರ್ಯದರ್ಶಿಯಾದ ಮೋಕ್ಷಿತ್ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ರಝೀನಾ ಬಾನು ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು.




