ಅನುಮಾನಾಸ್ಪದವಾಗಿ ಯುವಕರ ಶವ ಕೆರೆಯಲ್ಲಿ ಪತ್ತೆ

Share with

ದಾವಣಗೆರೆ ನಗರದ ಕುಂದುವಾಡ ಕೆರೆಯಲ್ಲಿ ಇಬ್ಬರು ಯುವಕರ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಶಾಂತಿನಗರದ ಚೇತನ್ (22), ಮನು (23) ಮೃತ ದುರ್ದೈವಿಗಳು. ಈ ಇಬ್ಬರು ಕಳೆದ 2 ದಿನಗಳಿಂದ ನಾಪತ್ತೆಯಾಗಿದ್ದರು.

ಇಂದು ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಇಬ್ಬರ ಶವಗಳು ಕೆರೆಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿವೆ. ಮೃತಪಟ್ಟ ಈ ಯುವಕರು ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದರಾ? ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ವಿದ್ಯಾನಗರ ಠಾಣೆ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.


Share with

Leave a Reply

Your email address will not be published. Required fields are marked *