ರಾಜ್ಯ ರಾಜಕಾರಣದಲ್ಲಿ ಕ್ಷಣ-ಕ್ಷಣಕ್ಕೂ ಮಹತ್ವದ ಬೆಳವಣಿಗೆ ನಡೆಯುತ್ತಿದೆ. ಡಿಕೆಶಿಗೆ CM ಸ್ಥಾನ ನೀಡಬೇಕು ಎಂದು ಹಲವು ಸಚಿವರು, ಶಾಸಕರು, ಕಾಂಗ್ರೆಸ್ ಮುಖಂಡರು ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ.

ಈ ನಡುವೆ ಇದೀಗ DK ಶಿವಕುಮಾರ್ಗೆ CM ಸ್ಥಾನ ನೀಡದೇ ಹೋದರೆ ರಾಜ್ಯಾದ್ಯಂತ ಹೋರಾಟಕ್ಕೆ ಒಕ್ಕಲಿಗ ಜನಾಂಗ ಮುಂದಾಗಲಿದೆ ಎನ್ನಲಾಗಿದೆ. ಈ ಕುರಿತು ಇಂದು ನಡೆಯುವ ಒಕ್ಕಲಿಗರ ಸಂಘದ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದು, ಅಂತಿಮ ಸಂದೇಶ ನೀಡಲಿದೆ ಎನ್ನಲಾಗಿದೆ.




