Kasaragod: ಎಂಡಿಎಂಎ, ಹೈಬ್ರಿಡ್‌ ಗಾಂಜಾ ಸಹಿತ ಓರ್ವನ ಬಂಧನ

Share with

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯುವ ಚುನಾವಣೆಯ ಹಿನ್ನೆಲೆಯಲ್ಲಿ ಅಮಲು ಪದಾರ್ಥ ಪತ್ತೆಗಾಗಿ ಪೊಲೀಸರು ಸಕ್ರಿಯವಾಗಿದ್ದು, ಇದರಂತೆ ಮೂರು ಕಡೆಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಎಂಡಿಎಂಎ ಮತ್ತು ಹೈಬ್ರಿಡ್‌ ಗಾಂಜಾ ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ.

ವಿದ್ಯಾನಗರ ಪೊಲೀಸರು ಮತ್ತು ಎಸ್.ಪಿ. ಯ ಅಮಲು ಪದಾರ್ಥ ವಿರುದ್ಧ ಸ್ಮಾಡ್ ಉಳಿಯತ್ತಡ್ಕ ಸಮೀಪದ ಇಜ್ಜತ್‌ನಗರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 6 ಗ್ರಾಂ ಎಂಡಿಎಂಎ ಮತ್ತು 6 ಗ್ರಾಂ ಹೈಬ್ರಿಡ್ ಗಾಂಜಾ ಪತ್ತೆ ಹಚ್ಚಿ ಉಳಿಯತ್ತಡ್ಕ ಗಣೇಶ ನಗರದ ಮುಹಮ್ಮದ್ ಹನೀಫಾ(34)ನನ್ನು ಬಂಧಿಸಿದ್ದಾರೆ.

ಹೊಸದುರ್ಗ ಪೊಲೀಸರು ಹೊಸದುರ್ಗ ಮುರಿಯನಾವಿಲ್‌ನ ಶಾಜಹಾನ್ ಅಬೂಬಕ್ಕರ್ (41) ಮನೆಗೆ ದಾಳಿ ನಡೆಸಿ ತಪಾಸಣೆ ಮಾಡಿದಾಗ ಸ್ನಾನದ ಕೊಠಡಿಯಲ್ಲಿ ಬಚ್ಚಿಡಲಾಗಿದ್ದ 3 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಲಾಯಿತು. ಈತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಬೇಕಲ ಪೊಲೀಸರು ಪೆರಿಯ ಕೇಂದ್ರೀಯ ವಿಶ್ವವಿದ್ಯಾಲಯ ಪರಿಸರದಲ್ಲಿ ವಾಹನ ತಪಾಸಣೆ ಸಂದರ್ಭದಲ್ಲಿ 1.95 ಗ್ರಾಂ ಎಂಡಿಎಂಎ ಸಹಿತ ಪಯ್ಯನ್ನೂರು ರಾಮಂತಳಿ ಕುನ್ನಾರ ನಿವಾಸಿಗಳಾದ ಎಂ.ಪ್ರಜಿತ್(53) ಮತ್ತು ಸಜಿತ್(36)ನನ್ನು ಬಂಧಿಸಿದರು.


Share with

Leave a Reply

Your email address will not be published. Required fields are marked *