ಆಕ್ಷನ್ ಅಖಾಡದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಾಣ್ಮೆಯ ಹೆಜ್ಜೆ ಇಟ್ಟಿತು. ಪಕ್ಕಾ ಪ್ಲಾನ್ನೊಂದಿಗೆ ಕಣಕ್ಕಿಳಿದಿದ್ದ ರೆಡ್ಆರ್ಮಿ ಚೀಪ್ ಮತ್ತು ಬೆಸ್ಟ್ ಆಟಗಾರ್ತಿಯರನ್ನ ಬೇಟೆಯಾಡಿತು.

ಆಕ್ಷನ್ ಅಖಾಡದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಾಣ್ಮೆಯ ಹೆಜ್ಜೆ ಇಟ್ಟಿತು. ಪಕ್ಕಾ ಪ್ಲಾನ್ನೊಂದಿಗೆ ಕಣಕ್ಕಿಳಿದಿದ್ದ ರೆಡ್ಆರ್ಮಿ ಚೀಪ್ ಮತ್ತು ಬೆಸ್ಟ್ ಆಟಗಾರ್ತಿಯರನ್ನ ಬೇಟೆಯಾಡಿತು.
ಯಾರೊಬ್ಬರ ಮೇಲೂ ಕನಿಷ್ಟ 1 ಕೋಟಿ ಹಣವನ್ನೂ ಇನ್ವೆಸ್ಟ್ ಮಾಡಲಿಲ್ಲ. ಇಂಗ್ಲೆಂಡ್ ವೇಗಿ ಲಾರೆನ್ ಬೆಲ್ಗೆ 90 ಲಕ್ಷ ನೀಡಿದ್ದೇ ಆರ್ಸಿಬಿಯ ದುಬಾರಿ ಖರೀದಿಯಾಗಿದೆ. ಸ್ಮೃತಿ ಮಂದಾನ, ಎಲ್ಲಿಸ್ ಪೆರ್ರಿ, ರಿಷಾ ಘೋಷ್, ಶ್ರೇಯಾಂಕ ಪಾಟೀಲ್ನ ರಿಟೈನ್ ಮಾಡಿಕೊಂಡಿದ್ದ ಆರ್ಸಿಬಿ ಅಳೆದುತೂಗಿ ಲೆಕ್ಕಾಚಾರ ಹಾಕಿ ಆಟಗಾರ್ತಿಯರನ್ನ ಖರೀದಿಸಿತು.
ಭಾರತದ ಕ್ಲಾಸ್ ಆಟಗಾರ್ತಿಯರಾದ ರಾಧಾ ಯಾದವ್, ಪೂಜಾ ವಸ್ತ್ರಾಕರ್, ಅರಂಧತಿ ರೆಡ್ಡಿ, ಪ್ರೇಮಾ ಯಾದವ್ ನ ಯಶಸ್ವಿಯಾಗಿ ಬಿಡ್ ಮಾಡ್ತು. ಆಸ್ಟ್ರೇಲಿಯಾದ ಝಾರ್ಜಿಯಾ ವೋಲ್, ಗ್ರೇಸ್ ಹ್ಯಾರೀಸ್, ಸೌತ್ ಆಫ್ರಿಕಾದ ನದಿನೆ ದಿ ಕ್ಲೆರ್ಕ್, ಇಂಗ್ಲೆಂಡ್ ಬೌಲರ್ ಲಿನ್ಸೀ ಸ್ಮಿತ್ ಆರ್ಸಿಬಿ ಖರೀದಿಸಿದ ಪ್ರಮುಖ ವಿದೇಶಿ ಆಟಗಾರ್ತಿಯರು.
RCB ಟೀಂ: ಸ್ಮೃತಿ ಮಂದಾನ, ಎಲ್ಲಿಸ್ ಪೆರ್ರಿ, ರಿಷಾ ಘೋಷ್, ಶ್ರೇಯಾಂಕ ಪಾಟೀಲ್, ಝಾರ್ಜಿಯಾ ವೋಲ್, ಗ್ರೇಸ್ ಹ್ಯಾರೀಸ್, ನದಿನೆ ದಿ ಕ್ಲೆರ್ಕ್, ಲಿನ್ಸೀ ಸ್ಮಿತ್, ರಾಧಾ ಯಾದವ್, ಪೂಜಾ ವಸ್ತ್ರಾಕರ್, ಅರಂಧತಿ ರೆಡ್ಡಿ, ಪ್ರೇಮಾ ರಾವತ್, ಲಾರೆನ್ ಬೆಲ್, ಹೇಮಲತಾ, ಗೌತಮಿ ನಾಯಕ್, ಪ್ರತ್ಯೋಷ್ ಕುಮಾರ್.




