ಡಾ. ಯು ಪಿ ಶಿವಾನಂದರಿಗೆ ಮುಖ್ಯಮಂತ್ರಿಗಳಿಂದ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ

Share with

ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಮಡಿಕೇರಿ ಇವರ ವತಿಯಿಂದ ಬೆಂಗಳೂರಿನ ಜೆಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ 2024ನೇ ಸಾಲಿನ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ ಆಯೋಜಿಸಲಾಗಿತ್ತು. ಸುಳ್ಯ, ಪುತ್ತೂರು, ಬೆಳ್ತಂಗಡಿಯಲ್ಲಿ ಹಲವಾರು ವರುಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮವನ್ನು ನಡೆಸಿಕೊಂಡು ಬರುತ್ತಿರುವ ಸುದ್ದಿ ಬಿಡುಗಡೆಯ ಆಡಳಿತ ನಿರ್ದೇಶಕ ಡಾ. ಯು ಪಿ ಶಿವಾನಂದರವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಪ್ರಶಸ್ತಿ ನೀಡಿ ಗೌರವಿಸಿದರು.

ಇವರೊಂದಿಗೆ ಕೆ.ಆ‌ರ್.ಗಂಗಾಧಾರ, ಡಿ.ಎಸ್.ಆನಂದ ಅವರಿಗೆ, CM ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಿ, ಪ್ರಶಸ್ತಿ ವಿಜೇತ ಗಣ್ಯರಿಗೆ ಅಭಿನಂದಿಸಿದರು.


Share with

Leave a Reply

Your email address will not be published. Required fields are marked *