ಕಾಸರಗೋಡು: ಮದ್ರಸ ವಿದ್ಯಾರ್ಥಿಗೆ ಕಾರಿನಲ್ಲಿ ಲಿಫ್ಟ್ ನೀಡಿದ 60 ವರ್ಷ ಪ್ರಾಯದ ವೃದ್ಧ ಪ್ರಯಾಣ ಮಧ್ಯೆ ದೌರ್ಜನ್ಯ ಗೈಯ್ಯಲು ಯತ್ನಿಸಿರುವುದಾಗಿ ದೂರಲಾಗಿದೆ. 13ರ ಹರೆಯದ ಬಾಲಕನ ದೂರಿನ೦ತೆ ಪರಪ್ಪ ನಿವಾಸಿ ರಜಾಕಾ (60) ಎಂಬಾತನ ವಿರುದ್ಧ ವೆಳ್ಳರಿಕುಂಡ್ ಪೊಲೀಸರು ಪೋಕೋ ಪ್ರಕಾರ ಕೇಸು ದಾಖಲಿಸಿದ್ದಾರೆ.

ಡಿ.2 ರಂದು ಮದ್ರಸ ತರಗತಿ ಮುಗಿಸಿ ಮನೆಗೆ ವಿದ್ಯಾರ್ಥಿ ನಡೆದುಕೊಂಡು ಹೋಗುತ್ತಿದ್ದ. ಈ ಮಧ್ಯೆ ಕಾರಿನೊಂದಿಗೆ ಬಂದ ರಜಾಕ್ ಬಾಲಕನಿಗೆ ಲಿಫ್ಟ್ ನೀಡಿದ್ದಾನೆ. ಪ್ರಯಾಣ ಮಧ್ಯೆ ಬಾಲಕನನ್ನು ಚುಂಬಿಸಿರುವುದಾಗಿ ಹೇಳಲಾಗುತ್ತಿದೆ. ವಿದ್ಯಾರ್ಥಿ ಮನೆಗೆ ತಲುಪಿ ಪೋಷಕರೊಂದಿಗೆ ಈ ಬಗ್ಗೆ ತಿಳಿಸಿದ್ದು, ಬಳಿಕ ಮನೆಮಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.




