ನಾಳೆ ರಷ್ಯಾ ಅಧ್ಯಕ್ಷ ವ್ಹಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ

Share with

ನವದೆಹಲಿ: ನಾಳೆ ರಷ್ಯಾ ಅಧ್ಯಕ್ಷ ವ್ಹಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಹಲವು ವಿಷಯಗಳ ಕುರಿತಂತೆ ಮಾತುಕತೆ ನಡೆಸಲಿದ್ದು, ಪ್ರಮುಖ ಒಪ್ಪಂದಗಳಿಗೂ ಬರುವ ಸಾಧ್ಯತೆ ಇದೆ.

ರಷ್ಯಾ ಅಧ್ಯಕ್ಷ ಪ್ಲಾಡಿಮಿರ್ ಪುಟಿನ್ ಅವರ ಭಾರತದ ಭೇಟಿಗೂ ಮುನ್ನ ದೆಹಲಿಯಲ್ಲಿ ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಲಾಗಿದೆ. ರಷ್ಯಾ ಅಧ್ಯಕ್ಷ ಪುಟಿನ್ ಅವರ ವಾಸ್ತವ್ಯದ ಉದ್ದಕ್ಕೂ ಕಟ್ಟುನಿಟ್ಟಿನ ಸುರಕ್ಷತೆಯನ್ನು ಒದಗಿಸಲು ಅವರ ಭದ್ರತೆಯನ್ನು ಭಾರತ ಮತ್ತು ರಷ್ಯಾದ ಏಜೆನ್ಸಿಗಳು ಜಂಟಿಯಾಗಿ ಸಂಘಟಿಸುತ್ತಿವೆ.

ಪುಟಿನ್ ಡಿಸೆಂಬರ್ 4ರಂದು ದೆಹಲಿಯಲ್ಲಿ ನಡೆಯಲಿರುವ 23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಮೆರಿಕ ವಿಧಿಸಿರುವ ನಿರ್ಬಂಧಗಳಿಂದ ಭಾರತ-ರಷ್ಯಾ ವ್ಯಾಪಾರವನ್ನು ಪ್ರತ್ಯೇಕ್ಷಿಸುವ ಕ್ರಮಗಳು, ಪರಮಾಣು ಶಕ್ತಿಗಾಗಿ ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳ ಪ್ರಸ್ತಾಪ ಮತ್ತು ರಕ್ಷಣಾ ಸಹಕಾರವನ್ನು ಗಾಢಗೊಳಿಸುವುದು ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಪುಟಿನ್ ನಡುವಿನ ಶೃಂಗಸಭೆಯ ಕಾರ್ಯಸೂಚಿಯಲ್ಲಿದೆ.

ರಷ್ಯಾ ಇಂಧನ ಮತ್ತು ಮಿಲಿಟರಿ ಉಪಕರಣಗಳ ಖರೀದಿಯನ್ನು ಕಡಿಮೆ ಮಾಡಲು ಅಮೆರಿಕದಿಂದ ಒತ್ತಡದ ಹಿನ್ನೆಲೆಯಲ್ಲಿ, ರಷ್ಯಾದೊಂದಿಗೆ ರಕ್ಷಣಾ ಮತ್ತು ಆರ್ಥಿಕ ಸಂಬಂಧಗಳನ್ನು ಪುನಶ್ಚತನಗೊಳಿಸುವ ಮೂಲಕ ಭಾರತವು ತನ್ನ ಕಾರ್ಯತಂತ್ರದ ಸ್ವಾಯತ್ತತೆಯನ್ನು ಒತ್ತಿಹೇಳಲು ಈ ಸಭೆಯನ್ನು ಒಂದು ಅವಕಾಶವೆಂದು ಪರಿಗಣಿಸುತ್ತಿದೆ ಎಂದು ವರದಿ ತಿಳಿಸಿದೆ.


Share with

Leave a Reply

Your email address will not be published. Required fields are marked *