ಭಾರತ ತಂಡಕ್ಕೆ ಮಹಿಳಾ ವಿಶ್ವಕಪ್ ಗೆದ್ದುಕೊಟ್ಟ ರಿಚಾ ಘೋಷ್ ಬುಧವಾರ ಪಶ್ಚಿಮ ಬಂಗಾಳ ಪೊಲೀಸ್ ಇಲಾಖೆಗೆ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಹುದ್ದೆಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ . ಕಳೆದ ತಿಂಗಳು ಭಾರತ ಮಹಿಳಾ ತಂಡವು ತಮ್ಮ ಮೊದಲ ವಿಶ್ವಕಪ್ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ವಿಕೆಟ್ ಕೀಪರ್-ಬ್ಯಾಟರ್ ರಿಚಾ ಘೋಷ್ ಅವರನ್ನು ಸಿಲಿಗುರಿ ಕಮಿಷನರೇಟ್‌ನಲ್ಲಿ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಆಗಿ ನೇಮಿಸಲಾಗಿದೆ ಎಂದು ರಾಜ್ಯ ಪೊಲೀಸ್ ಇಲಾಖೆಯು ಟ್ವೀಟ್ ಮಾಡಿದೆ. “ರಿಚಾ, ಪಶ್ಚಿಮ ಬಂಗಾಳ ಪೊಲೀಸ್ ಕುಟುಂಬಕ್ಕೆ ಸ್ವಾಗತ. ಅನೇಕ ಶುಭಾಶಯಗಳು ಮತ್ತು ಅಭಿನಂದನೆಗಳೊಂದಿಗೆ,” ಎಂದು ಟ್ವೀಟ್ ನಲ್ಲಿ ಹೇಳಿದ್ದಾರೆ.

ವಿಶ್ವಕಪ್ ವಿಜೇತ ರಿಚಾ ಘೋಷ್ ಪಶ್ಚಿಮ ಬಂಗಾಳ ಪೊಲೀಸ್ ಇಲಾಖೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಸಿಲಿಗುರಿ ಎಸಿಪಿಯಾಗಿ ಭಾರತದ ವಿಶ್ವಕಪ್ ವಿಜೇತ ಆಟಗಾರ್ತಿ ರಿಚಾ ಘೋಷ್ ಬುಧವಾರ ಅಧಿಕೃತವಾಗಿ ಪಶ್ಚಿಮ ಬಂಗಾಳ ಪೊಲೀಸ್ ಇಲಾಖೆಗೆ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಹುದ್ದೆಯಲ್ಲಿ ಸೇರ್ಪಡೆಗೊಂಡಿದ್ದಾರೆ.




