ಪೆರ್ಲ: ಬೀದಿ ನಾಯಿಯೊಂದು ಬಾಲಕನನ್ನು ಅಟ್ಟಾಡಿಸಿ ಆಕ್ರಮಣ ಮಾಡಿದ ಘಟನೆ ಎಣ್ಮಕಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರ್ಲ ಎಂಬಲ್ಲಿ ಶನಿವಾರ (ಡಿ.7) ನಡೆದಿದೆ.

ಪೇಟೆಗೆ ಆಗಮಿಸಿದ ಬಾಲಕನ ಮೇಲೆ ನಾಯಿ ಏಕಾಏಕಿ ದಾಳಿ ಮಾಡಿದೆ. ಭಯದಿಂದ ಬೊಬ್ಬಿಟ್ಟು ಓಡುತ್ತಿದ್ದ ಬಾಲಕನನ್ನು ನಾಯಿ ಬೆನ್ನಟ್ಟಿ ಕಚ್ಚಿ ಗಾಯಗೊಳಿಸಿದ ದೃಶ್ಯವಿರುವ ವೀಡಿಯೋ ವೈರಲ್ ಆಗಿದ್ದು, ಪರಿಸರದ ನಾಗರಿಕರಲ್ಲಿ ಆತಂಕ ಹುಟ್ಟಿಸಿದೆ.
ಬಾಲಕನಿಗೆ ಮಾತ್ರವಲ್ಲದೆ, ಇತರ ಇಬ್ಬರಿಗೆ ಕೂಡ ನಾಯಿ ಕಚ್ಚಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಗಾಯಗೊಂಡ ಬಾಲಕನನ್ನು ಮನೆಯವರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ.
ನೆಲ್ಲಿಕುಂಜೆ ಕಸಬಾ ಕಡಪ್ಪುರದಲ್ಲಿ ಕಳೆದ ಕೆಲವು ದಿನಗಳ ಹಿಂದೆ ನಾಲೈದು ದಿನಗಳ ಅವಧಿಯಲ್ಲಿ ಬೀದಿ ನಾಯಿಗಳು ಕಚ್ಚಿದ ಘಟನೆಯಲ್ಲಿ 20 ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು.
ಬೀದಿ ನಾಯಿ ಸಂಬಂಧಿಸಿದ ಸಮಸ್ಯೆ ಗಳ ಕುರಿತು ಸಾರ್ವಜನಿಕರಿಗೆ ನೆರವು ನೀಡಲು ರಾಜ್ಯ ಮಟ್ಟದಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ.




