ಪ್ರತಿ ಸಿನಿಮಾ ಅದ್ಧೂರಿಯಾಗಿ ಪ್ರಮೋಷನ್ ಮಾಡಿ ರಿಲೀಸ್ ಮಾಡುತ್ತಿದ್ದ ದರ್ಶನ್ ಈ ಬಾರಿ ಪ್ರಚಾರ ಮಾಡೋಕೆ ಸಾಧ್ಯವಾಗಿಲ್ಲ. ಆದರೆ, ಈ ಬಾರಿ ದರ್ಶನ್ ಅನುಪಸ್ಥಿತಿಯಲ್ಲಿ ಡೆವಿಲ್ ಮೂವಿ ರಿಲೀಸ್ ಆಗುತ್ತಿದೆ. ‘ದಿ ಡೆವಿಲ್’ ಸಿನಿಮಾ ನಾಳೆ ರಿಲೀಸ್ ಆಗುತ್ತಿದೆ.

ಈಗಾಗಲೇ ಮುಂಗಡ ಟಿಕೆಟ್ ಬುಕಿಂಗ್ ಶುರುವಾಗಿದ್ದು, ಲಕ್ಷಾಂತರ ಟಿಕೆಟ್ ಸೋಲ್ಡ್ ಔಟ್ ಆಗಿವೆ. ಇದರಿಂದಾಗಿ ಭರ್ಜರಿ ಕಲೆಕ್ಷನ್ ಆಗಿದೆ. ಮೊದಲ ದಿನದ ಟಿಕೆಟ್ ಬುಕಿಂಗ್‌ನಿಂದಲೇ 4 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಆಗಿದೆ ಎಂಬ ಮಾಹಿತಿ ಇದೆ.




