ಆಂಧ್ರ ಪ್ರದೇಶ, ಡಿಸೆಂಬರ್ 15: ಪ್ರಕೃತಿ ವಿಸ್ಮಯವೇ ಹಾಗೆ, ಕೆಲವೊಮ್ಮೆ ನಮ್ಮ ಕಣ್ಣುಗಳು ಕೂಡ ನಂಬಲು ಸಾಧ್ಯವಾಗುವುದಿಲ್ಲ. ಒಮ್ಮೊಮ್ಮೆ ಈ ವಿಸ್ಮಯಗಳನ್ನು ಕಂಡಾಗ ನಿಜಕ್ಕೂ ಅಚ್ಚರಿಯಾಗುತ್ತದೆ. ಇಲ್ಲಿಯವರೆಗೆ ನೀವು ಕೇವಲ ಎರಡು ಕಾಲಿನ ಕೋಳಿಗಳನ್ನು ಮಾತ್ರ ನೋಡಿರುತ್ತೀರಿ. ಈ ಕೋಳಿ ಮರಿಗೆ (chicks) ನಾಲ್ಕು ಕಾಲುಗಳಿವೆ. ಇದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೋ. ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ (Alluri Sitarama Raju District of Andhra Pradesh) ಹುಕುಂಪೇಟ ಮಂಡಲದ ಪೆಧಾ ಬುರುಗುಪುಟ್ಟುವಿನಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಕಿಲೋ ಅಪ್ಪರಾವ್ ಎಂಬವರ ಮನೆಯಲ್ಲಿ ನಾಲ್ಕು ಕಾಲುಗಳಿರುವ ವಿಚಿತ್ರ ಕೋಳಿ ಮರಿಯೊಂದು ಜನಿಸಿದೆ.
ಮೊಟ್ಟೆಯೊಡೆದು ಹೊರಬಂದ ನಾಲ್ಕು ಮರಿಗಳಲ್ಲಿ ಒಂದು ಮರಿ ಮಾತ್ರ ವಿಚಿತ್ರವಾಗಿ ಕಾಣುತ್ತಿತ್ತು. ಅಪ್ಪರಾವ್ ಸೂಕ್ಷ್ಮವಾಗಿ ಗಮನಿಸಿದಾಗ ಕೋಳಿ ಮರಿಯೊಂದಕ್ಕೆ ನಾಲ್ಕು ಕಾಲುಗಳು ಇರುವುದು ತಿಳಿದು ಬಂದಿದೆ.

ಆದರೆ ಇದೀಗ ಈ ನಾಲ್ಕು ಕಾಲುಗಳನ್ನು ಹೊಂದಿರುವ ಈ ವಿಚಿತ್ರ ಕೋಳಿ ಮರಿ ಎಲ್ಲರ ಗಮನ ಸೆಳೆಯುತ್ತಿದೆ. ಈ ಮರಿಯನ್ನು ನೋಡಲು ಸುತ್ತಮುತ್ತಲಿನ ಹಳ್ಳಿಗಳ ಜನರು ಸೇರುತ್ತಿದ್ದಾರೆ. ಈ ವಿಚಿತ್ರ ಕೋಳಿ ಮರಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.




